ಹುಟ್ಟಿದ ಮಗುವಿಗೆ ಅಂಗವೈಕಲ್ಯ : ಮಮತೆ ಮರೆತ ತಾಯಿ ಮಾಡಿದ್ದೇನು…?

ಚಿಕ್ಕಬಳ್ಳಾಪುರ : ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಮಾತಿದೆ. ಆದರೆ ಅದಕ್ಕೆ ವಿರುದ್ಧ ಎಂಬಂತೆ ಹುಟ್ಟಿದ ಮಗುವಿಗೆ ಅಂಗವೈಕಲ್ಯವಿದ್ದ ಕಾರಣ ದಂಪತಿ ಆ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟುಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೆ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಬಲಗೈ ಹಾಗೂ ಎಡಗಾಲಿನ ಬೆರಳುಗಳಿರಲಿಲ್ಲ. ಮಗು ಅಂಗವಿಕಲತೆಯಿಂದ ಹುಟ್ಟಿದೆ ಎಂಬ ಕಾರಣಕ್ಕೆ ದಂಪತಿ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದಾರೆ.

ಹುಟ್ಟಿದ ಮಗುವಿಗೆ ತಾಯಿಯ ಹಾಲು ಅತ್ಯಗತ್ಯ. ಕೆಲ ತಿಂಗಳ ಕಾಲ ಹಾಲುಣಿಸಿ ಮಗುವನ್ನು ವಾಪಸ್‌ ತಂದುಕೊಡಿ ಎಂದರೂ ಕೇಳದೆ ದಂಪತಿ ಮಗುವನ್ನು ಬಿಟ್ಟು ಹೋಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com