ಸಿದ್ದರಾಮಯ್ಯನ ಯೋಗ್ಯತೆಗೆ ಯಾವತ್ತಾದರೂ ಸ್ಲಂ ವಾಸ್ತವ್ಯ ಮಾಡಿದ್ದಾರಾ ? : BSY

ಬೆಂಗಳೂರು : ಮಾಜಿ ಸಿಎಂ ಅವರ ಸ್ಲಂ ವಾಸ್ತವ್ಯ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಬೆಳಗ್ಗೆ ಕೊಳಗೇರಿಯ ಜನರ ಜೊತೆ ಯಡಿಯೂರಪ್ಪ ಸಂವಾದ ನಡೆಸಿದ್ದು, ತಾವು ತಂಗಿದ್ದ ಆಟೋ ಚಾಲಕ ಮುನಿರತ್ನಂ ಅವರ ಮನೆಯಲ್ಲೇ ದೇವರಿಗೆ ಕೈಮುಗಿದು ದಿನಚರಿ ಆರಂಭಿಸಿದರು.

ಲಕ್ಷ್ಮಣ ಪುರಿಯ ಕೊಳಗೇರಿಯಲ್ಲಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮಾಡಿದ ಬಿಎಸ್‌ವೈ, ಸ್ಲಂ ವಾಸಿಗಳ ಹಕ್ಕುಪತ್ರ ವಿತರಣೆ ವಿಳಂಬ, ಕುಡಿಯುವ ನೀರು, ಶಾಚಾಲಯ, ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಹತ್ತಿರದಿಂದ ನೋಡಿದರು. ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನ ಯೋಗ್ಯತೆಗೆ ಯಾವತ್ತಾದರೂ ಸ್ಲಂಗೆ ಬಂದು ವಾಸ್ತವ್ಯ ಹೂಡಿದ್ದಾರೆಯ, ತಿಂಡಿ ತಿಂದಿದ್ದಾರೆಯೇ ಎಂದು ಪ್ರಶ್ನಿಸಿದರು. ಜೊತೆಗ ತಮ್ಮ ಕೊಳಗೇರಿ ವಾಸ್ತವ್ಯ ಕುರಿತು ಟೀಕಿಸಿದ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದು, ನಾವು ಯಾವಾಗ, ಏನು ಮಾಡಬೇಕೆಂಬುದನ್ನು ಸಿದ್ದರಾಮಯ್ಯನಿಂದ ಕಲಿಯಬೇಕಾಗಿಲ್ಲ ಎಂದಿದ್ದಾರೆ.

ಸಿದ್ದರಾಮಯಯ ಸರ್ಕಾರದಿಂದ ಒಳ್ಳೆಯದನ್ನಂತೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜಪಿ ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ.

ಇದೇ ವೇಳೆ ಸ್ಲಂ ದೌರ್ಭಾಗ್ಯ ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯದ ಕೊಳಗೇರಿ ವಾಸಿಗಳ ಸ್ಥಿತಿಗತಿ, ಅವರ ಜೀವನ ಶೈಲಿ, ಮುಂತಾದ ವಿಚಾರಗಳ ಕುರಿತು ಅಧ್ಯಯನ ನಡೆಸಿ ಸ್ಲಂ ದೌರ್ಭಾಗ್ಯ ಎಂಬ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com