ದಕ್ಷಿಣ ಕನ್ನಡದಲ್ಲಿ ಮತ್ತೊಂದು ಕೊಲೆ : ಹಾರೆಯಿಂದ ಹೊಡೆದು ಕಾರ್ಮಿಕನ ಹತ್ಯೆ

ಉಡುಪಿ : ಕಟಪಾಡಿ ಸಮೀಪದ ಅಚ್ಚಡ ರಸ್ತೆಯ ವಿದ್ಯಾನಗರದಲ್ಲಿ ಉತ್ತರ ಕರ್ನಾಟಕ ಮೂಲದ ವಲಸೆ ಕಾರ್ಮಿಕನೊಬ್ಬನನ್ನ ಹಾರೆಯಿಂದ ಹೊಡೆದು ಕೊಲೆ ಮಾಡಲಾಗಿದೆ.ನಿನ್ನೆ ತಡ ರಾತ್ರಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಮರಳಿನ ರಾಶಿಯಲ್ಲಿ ಬಿದ್ದಿದ್ದ ಶವವನ್ನು‌ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡದ್ದಾರೆ.

ಮೃತ ದೇಹದ ಪಕ್ಕ ತಲೆಗೆ ಹೊಡೆದ ಹಾರೆ ಹಾಗೂ ಊಟಕ್ಕೆಂದು ಕೊಂಡೊಯ್ಯುತ್ತಿದ್ದ ಮೊಸರಿನ‌ ಪ್ಯಾಕೆಟ್ ಪತ್ತೆಯಾಗಿದೆ. ಈವರೆಗೂ ವ್ಯಕ್ತಿ ಯಾರೆಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆ ಭಾಗದಲ್ಲಿ ವಾಸಿಸುತ್ತಿರುವ ಉತ್ತರ ಕರ್ನಾಟಕ‌ ಮೂಲದವರನ್ನು‌ ಕರೆಸಿ ಗುರುತು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದು, ಕಟಪಾಡಿ ಉಪಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com