ಚುನಾವಣೆಗೋಸ್ಕರವೇ ಸ್ಲಂ ವಾಸ್ತವ್ಯ ಮಾಡುತ್ತಿದ್ದೇವೆ : ಸತ್ಯ ಒಪ್ಪಿಕೊಂಡ K.S ಈಶ್ವರಪ್ಪ

ಶಿವಮೊಗ್ಗ : ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರು ಜನರ ಮನವೊಲಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ಸ್ಲಂ ವಾಸ್ತವ್ಯ ಹೂಡಿದ್ದು, ಚುನಾವಣೆಗೊಸ್ಕರವೇ ಸ್ಲಂ ನಲ್ಲಿ ವಾಸ್ತವ್ಯ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಜೊತೆಗೆ ಸ್ಲಂ ವಾಸಿಗಳಿಗೆ ಧೈರ್ಯ ತುಂಬುವ ಸಲುವಾಗಿ ವಾಸ್ತವ್ಯ ಹೂಡಿರುವುದಾಗಿ ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದಿರುವ ಈಶ್ವರಪ್ಪ, ರಾಹುಲ್ ಗಾಂಧಿ ಕಪಟ ಹಿಂದುತ್ವ ವಾದಿಯಾಗಿದ‌್ದಾರೆ. ಚುನಾವಣೆ ಬಂದಾಗ ದೇಗುಲಗಳು ರಾಹುಲ್ ಗಾಂಧಿಗೆ ನೆನಪಾಗಿವೆ. ರಾಹುಲ್ ಗಾಂಧಿ ಎಲ್ಲಾ 224 ಕ್ಷೇತ್ರಕ್ಕೂ ಬರಬೇಕು.. ಎಲ್ಲೆಲ್ಲಿ ರಾಹುಲ್ ಹೋಗ್ತಾರೋ ಅಲ್ಲಿ ಬಿಜೆಪಿ ಗೆಲ್ಲುತ್ತದೆ. ಶಿವಮೊಗ್ಗಕ್ಕೂ ಅವರು ಬರಬೇಕು ಎಂಬುದು ನನ್ನ ಆಸೆಯಾಗಿತ್ತು. ಸಿದ್ದರಾಮಯ್ಯ ಮಠ ಮಾನ್ಯಗಳಿಗೆ ದ್ರೋಹ ಮಾಡಿದ್ದಾರೆ.  ಚುನಾವಣೆಗಾಗಿ ಈ ರೀತಿ ನಾಟಕ ಮಾಡಬಾರದು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com