ರಷ್ಯಾದ ಮಾಸ್ಕೋದಲ್ಲಿ ವಿಮಾನ ಪತನ : 71 ಮಂದಿ ಸಜೀವ ದಹನ ?

ಮಾಸ್ಕೋ : ರಷ್ಯಾದಲ್ಲಿ 71 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ಪತನವಾಗಿದ್ದು, ಅನೇಕರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಸಂಜೆ ಸರಟೋವ್‌ ಏರ್‌ಲೈನ್ಸ್‌ನ ವಿಮಾನವೊಂದು ಮಾಸ್ಕೋದಿಂದ ಹೊರಟಿದ್ದು ಕೂಡಲೆ ತಾಂತ್ರಿಕ ದೋಷದಿಂದಾಗಿ ರಡಾರ್‌ ಸಂಪರ್ಕ ಕಳೆದುಕೊಂಡಿರುವುದಾಗಿ ವಿಮಾನಯಾನ ಸಂಸ್ಥೆ ಹೇಳಿದೆ.

ವಿಮಾನದಲ್ಲಿ 65 ಮಂದಿ ಪ್ರಯಾಣಿಕರಿದ್ದು, 6 ಮಂದಿ ವಿಮಾನ ಸಿಬ್ಬಂದಿ ಇದ್ದರು ಎಂದು ಸಂಸ್ಥೆ ಹೇಳಿದೆ. ವಿಮಾನ ಮಾಸ್ಕೋದಿಂದ ಉರಲ್ಸ್‌ನ ಓರ್ಸ್ಕ್ ಗೆ ಪ್ರಯಾಣ ಬೆಳೆಸಿತ್ತು. ಈ ವೇಳೆ ರಾಮನ್ಕೈ ಜಿಲ್ಲೆಯಲ್ಲಿ ವಿಮಾನ ಪತನವಾಗಿದೆ.

ವಿಮಾನ ಪತನವಾಗಿ ಹೊತ್ತಿ ಉರಿಯುತ್ತಿತ್ತು ಎಂದು ಗ್ರಾಮಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಲಾಗುತ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com