ಕೆಲಸ ಮಾಡಲು ಯುವಕರು ಸಿದ್ದರಿದ್ದಾರೆ, ಆದರೆ ಕೆಲಸ ಕೊಡಲು ಮೋದಿ ತಯಾರಿಲ್ಲ : ರಾ.ಗಾ

ರಾಯಚೂರು :  ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಿಂಧನೂರಿಗೆ ಆಗಮಿಸಿದ್ದು, ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದಾರೆ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಬಹಳ ವರ್ಷಗಳ ಹಿಂದೆ ಹೇಳಿದ್ದರು. ಭಾರತದ ಯುವಕರು ಬಸವಣ್ಣನವರ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತಾರೆ. ದೇಶಕ್ಕಾಗಿ ಯುವಕರು ಕೆಲಸ ಮಾಡಲು ಸಿದ್ಧರಿದ್ದಾರೆ. ಆದರೆ ಕೆಲಸ ಕೊಡಲು ಮೋದಿಯವರೇ ಹಿಂದೇಟು ಹಾಕುತ್ತಿದ್ದಾರೆ. ಪ್ರಧಾನಿ ಮೋದಿಯವರೇ ದೇಶದ ಯುವಕರಿಗೆ ಯಾವಾಗ ಉದ್ಯೋಗ ಕೊಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಮೋದಿ ದೇಶದ ಗತಕಾಲದ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಕಾಂಗ್ರೆಸ್ ಬಗ್ಗೆಯೂ ಮೋದಿ ಅಣಕವಾಡುತ್ತಾರೆ. ಮೋದಿ ಕೇವಲ ವಿಕೆಟ್‌ ಕೀಪರ್ ಅವರನ್ನು ನೋಡುತ್ತಿದ್ದಾರೆಯೇ ಹೊರತು ಎದುರು ನೋಡುತ್ತಿಲ್ಲ. ದೇಶದ ಭವಿಷ್ಯ ನೋಡುವ ಬಗ್ಗೆ ಪ್ರಧಾನಿಗಳು ನಮಗೆ ಬೇಕು. ಭವಿಷ್ಯದ ಬಗ್ಗೆ ಭಯವಿರುವವರು ಮಾತ್ರ ಹಿಂದೆ ನೋಡುತ್ತಾರೆ.
24 ಗಂಟೆಗಳಲ್ಲಿ ಮೋದಿ 450 ಉದ್ಯೋಗ ಸೃಷ್ಟಿ ಮಾಡುತ್ತಿದ್ದಾರೆ. ಆದರೆ ಚೀನಾ 24 ಗಂಟೆಯಲ್ಲಿ 50 ಸಾವಿರ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯರನ್ನು ನೋಡಿ ಮೋದಿ ಕಲಿಯಬೇಕಿದೆ. ಇನ್ನೂ ಒಂದು ವರ್ಷ ಬಾಕಿ ಇದೆ, ಒಳ್ಳೆಯ ಕೆಲಸ ಮಾಡಿ. ಇನ್ನೊಂದು ಸಾರಿ ಭ್ರಷ್ಟಾಚಾರದ ಬಗ್ಗೆ ಮಾತಾಡಬೇಡಿ ಎಂದಿದ್ದಾರೆ.

ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ. ಕರ್ನಾಟಕದ ಘನತೆ, ಗೌರವದ ಬಗ್ಗೆ ಮಾತಾಡುವುದನ್ನು ಮೊದಲು ಬಿಡಬೇಕು. ಕರ್ನಾಟಕದ ಜನತೆ ಸಿಎಂ, ಪರಮೇಶ್ವರ್ ಬಗ್ಗೆ ಅಭಿಮಾನ ಇಟ್ಟಿದ್ದಾರೆ. ಮೋದಿ ಬಸವಣ್ಣನವರ ಹೆಸರು ಹೇಳಿತ್ತಾರೆಯೇ ವಿನಃ ಅವರ ಕಾಯಕವೇ ಕೈಲಾಸ ತತ್ವವನ್ನು ಅನುಷ್ಟಾನಕ್ಕೆ ತರುತ್ತಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com