ಈ ಹಿಂದೆ ಸಿದ್ದರಾಮಯ್ಯ ಅವರಿಗೆ CM ಹುದ್ದೆ ತಪ್ಪಿಸಿದ್ದೇ ದೇವೇಗೌಡ : ಕಾಂಗ್ರೆಸ್‌ ಶಾಸಕ

ಕಲಬುರಗಿ : ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಸಿಎಂ ಸಿದ್ದರಾಮಯ್ಯ ನೀಚ ಎಂಬ ಹೇಳಿಕೆಗೆ  ವಿರುದ್ಧ ಆಳಂದ ಶಾಸಕ ಬಿ.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀಚ ಎಂಬ ಪದ ಬಳಕೆ ದೇವೇಗೌಡರ ವಿಕೃತ ಮನಸ್ಸಿಗೆ ಸಾಕ್ಷಿಯಾಗಿದ್ದು, ಈ ಮೂಲಕ ಅವರು ತಮ್ಮ ವ್ಯಕ್ತಿತ್ವ ಎಷ್ಟು ಚಿಕ್ಕದು ಎನ್ನುವುದು ಪ್ರದರ್ಶನ ಮಾಡಿದ್ದಾರೆ. ಆಚಾರವಿಲ್ಲದ ನಾಲಿಗೆ ಎಂಬ ಪುರಂದರ ದಾಸರ ಪದಗಳನ್ನು ದೇವೇಗೌಡರು ನಿತ್ಯ ಕೇಳಲಿ. ದಾಸರ ಪದ ಕೇಳಿದ ಮೇಲಾದ್ರೂ ದೇವೇಗೌಡರ ಬುದ್ದಿ ನೆಟ್ಟಗಾಗಬಹುದು ಎಂದಿದ್ದಾರೆ.

ಸಿಎಂ ವಿರುದ್ಧ ನೀಚ ಪದ ಬಳಕೆ ಯನ್ನು ಗೌಡರು ಗೌರವದಿಂದ ವಾಪಾಸ್ ತೆಗೆದುಕೊಳ್ಳಬೇಕು. ಸಿದ್ದರಾಮಯ್ಯ ಅವರನ್ನು ಈ ಮೊದಲು ಸಿಎಂ ಹುದ್ದೆ ತಪ್ಪಿಸಿದ್ದೆ ಈ ದೇವೇಗೌಡ. ದೊಡ್ಡ ಸಿದ್ದಾಂತ ಆದರ್ಶ ಹೇಳುವವರು ಕೋಮುವಾದಿಗಳ ಜೊತೆ ಸೇರಿದ್ದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯ ಒಬ್ಬ ಬಿಚ್ಚು ಮನಸ್ಸಿನ ನಿಷ್ಠಾವಂತ ವ್ಯಕ್ತಿ ಎಂದು ಸಿಎಂ ಗುಣಗಾನ ಮಾಡಿದ್ದಾರೆ.

Leave a Reply

Your email address will not be published.