ಗುಂಡೇಟು ಬಿದ್ದಿದ್ದರೂ ಪವಾಡ ಸದೃಶ ರೀತಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಶ್ರೀನಗರ : ಜಮ್ಮು-ಕಾಶ್ಮೀರದ ಸಂಜುವಾನ್‌ ನ ಸೇನಾ ಕ್ಯಾಂಪ್‌ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಯೋಧರಿಬ್ಬರು ಹುತಾತ್ಮರಾಗಿದ್ದರು. ಉಗ್ರರ ದಾಳಿ ವೇಳೆ ಗರ್ಭಿಣಿಯೊಬ್ಬರ ಬೆನ್ನಿಗೆ ಗುಂಡು ಹೊಕ್ಕಿದ್ದು, ಕೂಡಲೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುಂಡೇಟು ತಿಂದಿದ್ದ ಗರ್ಭಿಣಿಗೆ 9ತಿಂಗಳಾಗಿದ್ದು, ಸೇನಾಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಈ ವೇಳೆ 2.5 ಕೆ.ಜಿ ತೂಕದ ಮಗುವನ್ನು ಸಿಸೇರಿಯನ್‌ ಮಾಡುವ  ಮೂಲಕ ಹೊರತೆಗಿದ್ದಾರೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com