ಭಾರತೀಯರು ಕೊಳಕರು ಎಂಬುದು ಸತ್ಯ, ಇದಕ್ಕೆ ಕ್ಷಮೆ ಕೇಳಲ್ಲ : ಗೋವಾ ಸಚಿವ

ಪಣಜಿ : ಭಾರತೀಯ ಪ್ರವಾಸಿಗರು ಈ ಭೂಮಿಯಲ್ಲೇ ಅತೀ ಕೊಳಕರು ಎಂದು ಗೋವಾ ಸಚಿವ ವಿಜಯ್‌ ಸರ್ದೇಸಾಯಿ ಹೇಳಿಕೆ, ತನ್ನ ಹೇಳಿಕೆಗೆ ನಾನು ಬದ್ದನಾಗಿದ್ದೇನೆ, ಇದಕ್ಕಾಗಿ ನಾನು ಯಾರಲ್ಲಿಯೂ ಕ್ಷಮೆ ಯಾಚಿಸುವುದಿಲ್ಲ ಎಂದಿದ್ದಾರೆ.

ನಿನ್ನೆಯಲ್ಲಿ ವಿಜಯ್‌ ಸರ್ದೇಸಾಯಿ ಉತ್ತರ ಭಾರತೀಯರು ಜಗತ್ತಿನ ಕೊಳಕು ಜನ. ಗೋವಾದಲ್ಲಿ ಬರುವ ಪ್ರವಾಸಿಗರಲ್ಲಿ ಅವರೇ ಹೆಚ್ಚು ಕೊಳಕು. ಅವರು ಪ್ರಜ್ಞೆ ಇಲ್ಲದಂತೆ ವರ್ತಿಸುತ್ತಾರೆ. ಉತ್ತರ ಭಾರತದ ಪ್ರವಾಸಿಗರು ಗೋವಾವನ್ನು ಮತ್ತೊಂದು ಹರ್ಯಾಣ ಮಾಡಲು ಹೊರಟಿರುವುದಾಗಿ ಹೇಳಿದ್ದು ವಿವಾದ ಹುಟ್ಟು ಹಾಕಿದ್ದರು.

ಈ ಕುರಿತು ಇಂದು ಸಮರ್ಥನೆ ನೀಡಿದ್ದು, ನಾನು ಭಾರತೀಯರ ವಿರೋಧಿಯಲ್ಲ, ಅದರಲ್ಲೂ ಉತ್ತರ ಭಾರತೀಯರ ವಿರೋಧಿಯಂತೂ ಅಲ್ಲವೇ ಅಲ್ಲ. ಗೋವಾಗೆ ಭೇಟಿ ನೀಡುವ 6.5 ದಶಲಕ್ಷ ಪ್ರವಾಸಿಗರಲ್ಲಿ ಒಂದು ಸಣ್ಣ ವರ್ಗದ ಜನರು ಸಾಮಾಜಿಕವಾಗಿ ಅಸಹ್ಯ ಹುಟ್ಟಿಸುವುದಾಗಿ ಹೇಳಿದ್ದಾರೆ.

Leave a Reply

Your email address will not be published.