ಪಾಕ್‌ನಲ್ಲಿ ಪ್ಯಾಡ್‌ಮನ್‌ಗೆ ವಿರೋಧ : Social Mediaದಲ್ಲಿ ಮಹಿಳೆಯರಿಂದ ವ್ಯಾಪಕ ಖಂಡನೆ

ಇಸ್ಲಾಮಾಬಾದ್‌ : ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಅಭಿನಯದ ಪ್ಯಾಡ್‌ಮನ್‌ ಸಿನಿಮಾಗೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿದೆ. ಪಾಕಿಸ್ತಾನ ಸರ್ಕಾರದ ನಡೆಡೆ ಸೋಶಿಯಲ್‌ ಮೀಡಿಯಾಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಮಹಿಳೆಯರ ಖಾಸಗಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಈ ಸಿನಿಮಾಗೆ ತಡೆ ಒಡ್ಡಿರುವುದಕ್ಕೆ ಪಾಕಿಸ್ತಾನಿ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದ ನಿರ್ಧಾರಕ್ಕೆ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ್ದಾರೆ.
ಐ ಸಪೋರ್ಟ್‌ ಪ್ಯಾಡ್‌ಮನ್‌ ಎಂಬ ಹ್ಯಾಶ್ ಟ್ಯಾಗ್‌ನಡಿ ಪಾಕಿಸ್ತಾನಿ ಮಹಿಳೆಯರು ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ.
 ಈ ಸಿನಿಮಾ ಪಾಕಿಸ್ತಾನದ ಸಂಪ್ರದಾಯ ಹಾಗೂ ಸಂಸೃತಿಗೆ ವಿರೋಧವಾಗಿದೆ ಎಂಬ ಕಾರಣಕ್ಕೆ ಚಿತ್ರದ ಮೇಲೆ ನಿಷೇಧ ಹೇರಲಾಗಿತ್ತು, ವಿರೋಧ ವ್ಯಕ್ತವಾಗುತ್ತಿದ್ದಂತೆ ಮತ್ತೊಂದೆಡೆ ಸ್ಪಷ್ಟನೆ ನೀಡಿರುವ ಸರ್ಕಾರ, ಸೆನ್ಸಾರ್‌ ಮಂಡಳಿ ಇದನ್ನು ನೋಡಿ ಸರ್ಟಿಫಿಕೇಟ್‌ ನೀಡಿಲ್ಲ. ಆದ ಕಾರಣ ಬಿಡುಗಡೆಗೆ ಅನುಮತಿ ನೀಡಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com