ದುಬೈನಲ್ಲಿ ಮೊದಲ ಹಿಂದೂ ದೇವಾಲಯದ ಶಂಕುಸ್ಥಾಪನೆ ನೆರವೇರಿಸಿದ ಮೋದಿ

ದುಬೈ : ನಾಲ್ಕು ರಾಷ್ಟ್ರಗಳ ವಿದೇಶಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಭಾನುವಾರ ಅರಬ್‌ ರಾಷ್ಟ್ರವಾದ ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯದ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ದುಬೈನ ಒಪೇರಾ ಹೌಸ್‌ನಲ್ಲಿ ಸಾವಿರಾರು ಮಂದಿಯ ಸಮ್ಮುಖದಲ್ಲಿ ಪ್ರಧಾನಿ ಮೋದಿ ಲೈವ್‌ ಸ್ಟ್ರೀಮಿಂಗ್‌ನಲ್ಲಿ ಭೂಮಿ ಪೂಜೆ ನೆರವೇರಿಸಿದ್ದು, ಭಾರತೀಯರ ಪರವಾಗಿ ಅಬುದಾಬಿಯ ರಾಜಕುಮಾನಿಗೆ ಧನ್ಯವಾದ ತಿಳಿಸಿದರು.

ಈ ದೇವಾಲಯ 55 ಚದರ ಮೀಟರ್‌ ವಿಸ್ತೀರ್ಣದಲ್ಲಿ ಸ್ಥಾಪನೆಯಾಗುತ್ತಿದ್ದು, ದುಬೈನ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಾಣವಾಗುತ್ತಿದೆ. ಖಾಸಗಿ ದೇಣಿಗೆಯಿಂದ ದೇವಾಲಯ ನಿರ್ಮಾಣವಾಗುತ್ತಿದ್ದು, ಅಕ್ಷರ್‌ ಪುರುಷೋತ್ತಮ್‌ ಈ ಸ್ವಾಮಿ ನಾರಾಯಣ ದೇವಸ್ಥಾನದ ಆಡಳಿತ ನೋಡಿಕೊಳ್ಳಲಿದೆ.

ಇದೇ ವೇಳೆ ಅಬುದಾಬಿಯಲ್ಲಿನ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಮೋದಿ, ಈ ದೇವಾಲಯ ವಾಸ್ತುಶಿಲ್ಪ ಮತ್ತು ವೈಭವದಿಂದ ಕೂಡಿಯುವುದಷ್ಟೇ ಅಲ್ಲದೆ, ವಿಶ್ವದ ಜನರಿಗೆ ವಸುದೈವ ಕುಟುಂಬಕಂ ಎಂಬ ಸಂದೇಶವನ್ನು ತಿಳಿಸಿಕೊಡುತ್ತದೆ. ಅಬುದಾಬಿಯಲ್ಲಿ ದೇವಾಲಯ ನಿರ್ಮಾಣವಾಗುತ್ತದೋ ಇಲ್ಲವೋ ಎಂಬ ಅನುಮಾನದಿಂದಿದ್ದ ನೀವು ಈಗ ಮೋದಿಯವರೇ ದೇವಾಲಯ ಯಾವಾಗ ಆಗುತ್ತದೆ ಹೇಳಿ ಎನ್ನುತ್ತಿದ್ದೀರಿ. ನಮ್ಮ ಮೇಲೆ ನೀವಿಟ್ಟಿರುವ ನಂಬಿಕೆಗೆ ನಾನು ಆಭಾರಿಯಾಗಿದ್ದೇನೆ.

ನಮ್ಮದು ದೂರದೃಷ್ಠಿಯುಳ್ಳ ಸರ್ಕಾರ. ನಮ್ಮ ಯೋಜನೆಗಳು ತಕ್ಷಣಕ್ಕೆ ಪರಿಣಾಮಕಾರಿಯಲ್ಲದಿದ್ದರೂ ಮುಂದಿನ ಪೀಳಿಗೆಗೆ ಅದು ಸಹಕಾರಿಯಾಗುತ್ತದೆ. ಕಳೆದ 70 ವರ್ಷಗಳಿಂದ ಇದ್ದ ವ್ಯವಸ್ಥೆಯನ್ನು ಬದಲಿಸಿದಾಗ ಸ್ವಲ್ಪ ಸಮಸ್ಯೆಯಾಗುವುದು ನಿಜ. ಹಾಗೆಂದ ಮಾತ್ರಕ್ಕೆ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com