ದಕ್ಷಿಣ ಬೃಂದಾವನ ಸಂಗೀತ ಸಮ್ಮೇಳನ : ನಾದ ಲೋಕದಲ್ಲಿ ಮಿಂದೆದ್ದ ಶ್ರೋತೃಗಳು

ಸೆಂಟ್ರಲ್ ಕಾಲೇಜು ಆವರಣದ ಜ್ಞಾನ ಜ್ಯೋತಿ ಆಡಿಟೋರಿಯಮ್ ನಲ್ಲಿ ಸಂಜೋಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2 ದಿನಗಳ ‘ ದಕ್ಷಿಣ ಬೃಂದಾವನ ಸಂಗೀತ ಸಮ್ಮೇಳನ ‘ ಆಯೋಜಿಸಲಾಗಿದೆ.

ಮೊದಲ ದಿನ ಶನಿವಾರ ಸಾಯಂಕಾಲ ಉದ್ಘಾಟನೆಯ ನಂತರ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ ಹಾಗೂ ಪಂಡಿತ್ ಶುಭಾಂಕರ್ ಬ್ಯಾನರ್ಜಿ ಮೃದಂಗ-ತಬಲಾ ಜುಗಲ್ಬಂದಿ ಕಚೇರಿ ನಡೆಯಿತು. ಹಿಂದೂಸ್ತಾನಿ ಹಾಗೂ ಕರ್ನಾಟಕಿ ಸಂಗೀತದ ಪಕ್ಕವಾದ್ಯಗಳ ಅಪರೂಪದ ಸಂಗಮ ಸಂಗೀತ ರಸಿಕರನ್ನು ರಂಜಿಸಿತು.

Image may contain: 3 people

ನಂತರ ಮಾಸ್ಟರ್ ಷಡಜ್ ಗೋಡ್ಖಿಂಡಿ ಬಾನ್ಸುರಿಯಲ್ಲಿ ‘ ರಾಮ್ ಕಲ್ಯಾಣ್ ‘ ರಾಗವನ್ನು ನುಡಿಸಿದರು. ಶ್ರೀ ಕಿರಣ್ ಗೋಡ್ಖಿಂಡಿ ತಬಲಾ ಸಾಥ್ ನೀಡಿದರು.

ಪಂಡಿತ್ ವೆಂಕಟೇಶ್ ಕುಮಾರ್ ‘ ದುರ್ಗಾ ‘ ರಾಗದಲ್ಲಿ ಖಯಾಲ್ ಗಾಯನವನ್ನು ಪ್ರಸ್ತುತ ಪಡಿಸಿದರು. ಬಸಂತ್ ರಾಗದ ಪ್ರಸಿದ್ಧ ಬಂದಿಶ್ ಹಾಡಿದ ಪಂಡಿತ್ ಜೀ ಪ್ರೇಕ್ಷಕರ ಕೋರಿಕೆಯ ಮೇರೆಗೆ ‘ ತೊರೆದು ಜೀವಿಸಬಹುದೆ ‘ ಹಾಗೂ ‘ ಒಂದು ಬಾರಿ ಸ್ಮರಣೆ ಸಾಲದೆ ‘ ದಾಸರ ಪದಗಳನ್ನು ಹಾಡಿದರು.

ಭಾನುವಾರ ಸಾಯಂಕಾಲ ಉಸ್ತಾದ್ ಶಾಹಿದ್ ಪರ್ವೇಜ್ ಹಾಗೂ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರಿಂಧ ಸಿತಾರ್ ಹಾಗೂ ಬಾನ್ಸುರಿ  ಜುಗಲ್ಬಂದಿ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published.