WATCH : ಭಾರತೀಯರ ಮನಗೆದ್ದ Afridi : ತ್ರಿವರ್ಣ ಧ್ವಜಕ್ಕೆ ಪಾಕ್ ಆಲ್ರೌಂಡರ್ ಮಾಡಿದ್ದೇನು..?

ಪಾಕ್ ಅಲ್ರೌಂಡರ್ ಶಾಹಿದ್ ಅಫ್ರಿದಿ ತಮ್ಮ ಸ್ಫೋಟಕ ಹೊಡೆತಗಳಿಂದಲೇ ಕ್ರಿಕೆಟ್ ಲೋಕದಲ್ಲಿ ಹೆಸರಾದವರು. ಪಾಕಿಸ್ತಾನ ಅಷ್ಟೇ ಅಲ್ಲದೇ ಜಗತ್ತಿನ ಎಲ್ಲೆಡೆ ಅವರ ಅಭಿಮಾನಿಗಳಿದ್ದಾರೆ. ಬೂಮ್ ಬೂಮ್ ಖ್ಯಾತಿಯ ಶಾಹಿದ್ ಅಫ್ರಿದಿ, ತ್ರಿವರ್ಣ ದ್ವಜಕ್ಕೆ ಗೌರವದ ವರ್ತನೆ ತೋರುವ ಮೂಲಕ ಅಸಂಖ್ಯ ಭಾರತೀಯರ ಮನಗೆದ್ದಿದ್ದಾರೆ.

ಶಾಹಿದ್, ಸೇಂಟ್ ಮಾರಿಟ್ಜ್ ಐಸ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲು ಸ್ವಿಟ್ಕರ್ಲೆಂಡ್ ಗೆ ತೆರಳಿದ್ದರು. ಜಾಕ್ ಕಾಲಿಸ್, ಸೆಹ್ವಾಗ್, ಜಯವರ್ಧನೆ , ಅಖ್ತರ್ ಮುಂತಾದ ದಿಗ್ಗಜರೆಲ್ಲ ಟೂರ್ನಿಯಲ್ಲಿ ಭಾಗವಹಿಸಿದ್ದರು.

ಶನಿವಾರ ಪ್ಯಾಲೇಸ್ ಡೈಮಂಡ್ಸ್ ಹಾಗೂ ರಾಯಲ್ಸ್ ತಂಡಗಳ ನಡುವೆ ಪಂದ್ಯ ನಡೆಯಿತು. ಪಂದ್ಯದ ಬಳಿಕ ಅಭಿಮಾನಿಗಳ ಕೋರಿಕೆಯ ಮೇರೆಗೆ ಅಫ್ರಿದಿ ಸೆಲ್ಫೀಗೆ ಪೋಸ್ ನೀಡುತ್ತ ಸಾಗಿದ್ದರು. ಜನರ ಗುಂಪಿನಲ್ಲಿ ನಿಂತಿದ್ದ ಯುವತಿಯೊಬ್ಬಳು ಭಾರತದ ಧ್ವಜವನ್ನು ತನ್ನ ಕೈಯಲ್ಲಿ ಮಡಚಿ ಹಿಡಿದಿದ್ದಳು. ಅದನ್ನು ಕಂಡ ಶಾಹಿದ್, ‘ ಫ್ಲ್ಯಾಗ್ ಸೀದಾ ಕರೋ ನಾ (ಧ್ವಜವನ್ನು ಸರಿಯಾಗಿ ಹಿಡಿದುಕೊಳ್ಳಿ) ಎಂದು ಹೇಳಿ ನಂತರ ಸೆಲ್ಫೀಗೆ ಪೋಸ್ ನೀಡಿದ್ದಾರೆ.

ಶಾಹಿದ್ ತೋರಿರುವ ಈ ವರ್ತನೆ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Reply

Your email address will not be published.