BIGGBOSS ಶೃತಿ ಪ್ರಕಾಶ್‌, ಚಂದನ್‌ ಶೆಟ್ಟಿಗೆ ಒಲಿದು ಬಂತು ಅದೃಷ್ಟ…!

ಬಿಗ್‌ಬಾಸ್‌ ಸೀಸನ್‌ 5ರ ಚಂದದ ಗೊಂಬೆ ಶೃುತಿ ಪ್ರಕಾಶ್‌ಗೆ ಸ್ಯಾಂಡಲ್‌ವುಡ್‌ನಿಂದ ಆಫರ್‌ಗಳ ಮೇಲೆ ಆಫರ್‌ ಬರುತ್ತಲೇ ಇದೆಯಂತೆ. ಇದುವರೆಗೂ .ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳದ ಶೃುತಿ ಕನ್ನಡದ ಸ್ಟಾರ್‌ ನಿರ್ದೇಶಕ ಎಸ್‌. ನಾರಾಯಣ್ ಅವರ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ.

ಬೆಳಗಾವಿ ಮೂಲದವರಾದ ಶೃುತಿ, ಮುಂಬೈನಲ್ಲಿ ವಾಸವಿದ್ದು, ಗಾಯಕರಾಗಿದ್ದಾರೆ. ಅಲ್ಲದೆ ಅಭಿನಯದಲ್ಲೂ ಆಸಕ್ತಿ ಹೊಂದಿರುವ ಅವರು, ಸಿನಿಮಾ ಮಾಡುವ ಸಾಧ್ಯತೆ ಇದೆ.ಈಗಾಗಲೆ ಎಸ್‌ ನಾರಾಯಣ್ ಹಾಗೂ ಶೃುತಿ ಮಧ್ಯೆ ಸಿನಿಮಾಗೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ಅಂತಿಮವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಸ್‌.ನಾರಾಯಣ್ ಅವರ ಮುಂದಿನ ಸಿನಿಮಾಗೆ ಅವರ ಪುತ್ರ ಪಂಕಜ್‌ ನಾಯಕರಾಗಲಿದ್ದು, ಈಗಾಗಲೆ ಸ್ಕ್ರಿಪ್ಟ್‌ ಕೆಲಸ ಮುಗಿದಿದೆ. ಅಲ್ಲದೆ ಬಿಗ್‌ಬಾಸ್ ವಿನ್ನರ್‌ ಚಂದನ್‌ ಶೆಟ್ಟಿ ಈ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com