ಅಂದು Tabu ಸೀರೆ ಇಸ್ತ್ರಿ ಮಾಡ್ತಿದ್ದ Spotboy : ಇಂದು ಫೇಮಸ್ ಬಾಲಿವುಡ್ Director..!

ಯಾವ ಕ್ಷೇತ್ರದಲ್ಲಿಯೇ ಆಗಲಿ ಯಶಸ್ಸು ಸುಲಭವಾಗಿ ಒಂದೇ ದಿನದಲ್ಲಿ ಸಿಗುವಂತಹದಲ್ಲ. ಹಲವಾರು ವರ್ಷಗಳ ಕಾಲ ಸತತ ಪರಿಶ್ರಮದಿಂದ ಕೆಲಸ ಮಾಡಿದರೆ ಮಾತ್ರ ಅದನ್ನು ಪಡೆದುಕೊಳ್ಳಬಹುದು. ಕರ್ನಾಟಕದ ಮಂಗಳೂರಿನವರಾದ ರೋಹಿತ್ ಶೆಟ್ಟಿ ಬಾಲಿವುಡ್ ನ ಫೇಮಸ್ ಡೈರೆಕ್ಟರ್.

ರೋಹಿತ್ ಶೆಟ್ಟಿ ದಿಲ್ ವಾಲೆ, ಚೆನ್ನೈ ಎಕ್ಸ್ ಪ್ರೆಸ್, ಸಿಂಘಮ್ , ಗೋಲ್ ಮಾಲ್ ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಆದರೆ ಯಶಸ್ವೀ ನಿರ್ದೇಶಕರಾಗುವುದಕ್ಕೂ ಮುಂಚೆ ಸ್ಪಾಟ್ ಬಾಯ್ ಆಗಿದ್ದ ರೋಹಿತ್, ಚಿತ್ರದ ಶೂಟಿಂಗ್ ಸೆಟ್ ನಲ್ಲಿ ನಾಯಕಿಯ ಸೀರೆ ಇಸ್ತ್ರಿ ಮಾಡುತ್ತಿದ್ದರಂತೆ.

1995 ರಲ್ಲಿ ಅಜಯ್ ದೇವಗನ್ ಹಾಗೂ ಟಬು ಅಭಿನಯದ ‘ ಹಕೀಕತ್ ‘ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆ ಚಿತ್ರದ ಸೆಟ್ ನಲ್ಲಿ ಸ್ಪಾಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರೋಹಿತ್, ನಾಯಕಿಯಾಗಿದ್ದ ಟಬು ಅವರ ಸೀರೆಯನ್ನು ಇಸ್ತ್ರಿ ಮಾಡಿದ್ದರಂತೆ.

Leave a Reply

Your email address will not be published.

Social Media Auto Publish Powered By : XYZScripts.com