ಪ್ರೀತಿಸಿ, ಒತ್ತಾಯದಿಂದ ಅಪ್ರಾಪ್ತೆಯನ್ನು ಮದುವೆಯಾದ, ವರ್ಷದ ನಂತರ ಶವದೊಂದಿಗೆ ಬಂದ…!

ಶಿವಮೊಗ್ಗ : ಯುವಕನೊಬ್ಬ ಅಪ್ರಾಪ್ತೆಯನ್ನು ಪ್ರೀತಿಸಿ ಆಕೆಯನ್ನು ಕಿಡ್ನಾಪ್‌ ಮಾಡಿ, ಒತ್ತಾಯಿಸಿ ಮದುವೆ ಮಾಡಿಕೊಂಡು ಬಳಿಕ ಅವಳ ಶವದ ಜೊತೆ ಊರಿಗೆ ಬಂಧ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗಗದ ಭದ್ರಾವತಿ ತಾಲ್ಲೂಕಿನ ತಮ್ಮಣ್ಣ ಕಾಲೋನಿ ನಿವಾಸಿ ಆನಂದ್‌ (28) ಅದೇ ಊರಿನ ಅಪ್ರಾಪ್ತೆಯನ್ನು ಪ್ರೀತಿಸಿ, ಕಿಡ್ನಾಪ್‌ ಮಾಡಿ ಒತ್ತಾಯದಿಂದ ಮದುವೆಯಾಗಿದ್ದ. ಈ ಬಗ್ಗೆ ಬಾಲಕಿಯ ಪೋಷಕರು ಭದ್ರಾವತಿ ಹೊಸಮನೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಎಷ್ಟೇ ಶೋಧ ನಡೆಸಿದರೂ ಇಬ್ಬರೂ ಪತ್ತೆಯಾಗಿರಲಿಲ್ಲ.

ಆನಂದ್‌ ಬಾಲಕಿ ಜೊತೆ 1 ವರ್ಷ ಸಂಸಾರ ಮಾಡಿದ್ದು, ಗುರುವಾರ ರಾತ್ರಿ ಆಕೆ ಮೃತಪಟ್ಟಿರುವುದಾಗಿ ಪೋಷಕರಿಗಾಗಿ ಕರೆ ಮಾಡಿದ್ದಾನೆ. ಬಳಿಕ ಪತ್ನಿಯ ಶವದೊಂದಿಗೆ ಭದ್ರಾವತಿಗೆ ಆಗಮಿಸಿದ್ದು, ಈ ವೇಳೆ ಆನಂದ್‌ಗೆ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದದು, ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ಇನ್ನು ಆನಂದ್ ತನ್ನ ಮಗಳನ್ನು ಹತ್ಯೆ ಮಾಡಿರುವುದಾಗಿ ಪೋಷಕರು ಆರೋಪಿಸಿದ್ದರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published.