ಮೋದಿಯವರೇ ಸಿದ್ದರಾಮಯ್ಯ ನವರ ಬಳಿ ಆಡಳಿತದ ಪಾಠ ಕಲಿಯಿರಿ : ರಾಹುಲ್

ಬಳ್ಳಾರಿ : ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ವೇದಿಕೆಯಲ್ಲಿ ‘ ಎಲ್ಲರೀಗೂ ನಮಸ್ಕಾರ ‘ ಎಂದು ಕನ್ನಡದಲ್ಲಿ ಭಾಷಣ ಆರಂಭ ಮಾಡಿದರು. ನಮ್ಮ ಮುಂದೆ ಕರ್ನಾಟಕದ ಚುನಾವಣೆ ಇದೆ, ನೀವುಗಳು ನಿರ್ಣಯ ತೆಗೆದುಕೊಳ್ಳಬೆಕಾಗಿದೆ ‘ ಎಂದಿದ್ದಾರೆ.

‘ ನೀವು ಯಾರ ಮೇಲೆ ಭರವಸೆ ಮಾಡುತ್ತಿರ, ಒಂದು ಕಡೆ ಕಾಂಗ್ರೆಸ್ ನ ನಾನು ಸಿಎಂ ಸಿದ್ದು ಇದ್ದೇವೆ, ಮತ್ತೊಂದೆಡೆ ಬಿಜೆಪಿಯ ಮೋದಿ, ಅಮಿತ್ ಷಾ ಇದ್ದಾರೆ. ನಿವು ನಿರ್ಣಾಯ ತೆಗೆದುಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷ ಸತ್ಯದ ಪರವಾಗಿದೆ, ಬಿಜೆಪಿಯವರು ಬರಿ ಭಾಷಣ ಮಾಡುತ್ತ ಸುಳ್ಳು ಹೇಳುತ್ತಾರೆ. ಬಿಜೆಪಿಯವರು ಸುಳ್ಳಿನ ಕಂತೆಯನ್ನು ಮುಂದೆ ಇಡುತ್ತಾರೆ, ಅದ್ರೇ ನಾವು ಸತ್ಯದ ಪರವಾಗಿದ್ದೇವೆ ‘

ಹೈಕ ೩೭೧ ಜೆ ಬಗ್ಗೆ ಮಾತನಾಡಿದ ರಾಗ, ‘ ನಾನು, ಸೋನಿಯ ಹೇಳಿದ್ದಂತೆ ೩೭೧ ಜೇ ಕಾಲಂ ನೀಡಿ ಮಾತನ್ನು ಉಳಿಸಿಕೊಂಡಿವೆ. ಬಿಜೆಪಿಯವರು ಭಾಷಣ ಮಾಡುತ್ತಾರೆ, ಅಡ್ವಾಣಿಯವರು ಇದು ಸಾಧ್ಯವಿಲ್ಲ ಕೈಬಿಟ್ಟು ಬಿಡಿ ಎಂದು ಹೇಳಿದ್ದರು. ೩೭೧ ಜೆ ಭರವಸೆ ನೀಡಿದ್ದೆವೆ, ೩೫೦ ಕೋಟಿ ಅನುದಾನ ಬರುತ್ತಿತ್ತು, ಅಧಿಕೃತವಾದ ಬೆನ್ನಲ್ಲೆ ಇವಾಗ ೪೦೦ ಕೋಟಿ ಅನುದಾನ ಬರುತ್ತಿದೆ ‘ ಎಂದರು.

‘ ಈ ಭಾಗದಲ್ಲಿ ಮೆಡಿಕಲ್ ಸೀಟುಗಳು ಸಿಗುವುದು ಕಷ್ಡಕರವಾಗಿತ್ತು, ಹೈಕ ಭಾಗದಲ್ಲಿ ಮೂರು ಮೆಡಿಕಲ್ ಕಾಲೇಜು ಗಳನ್ನು ನೀಡಿರುವುದು ನಮ್ಮ ಕೊಡುಗೆ. ಈ ಪ್ರದೇಶ ಇದೀಗ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ, ಮೋದಿಯವರು ಬ್ಯಾಂಕ್ ಮೂಲಕ ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರೂ ಹಾಕುತ್ತೇನೆ ಎಂದು ಅ ಅಶ್ವಸನೆ ಎಲ್ಲಿ ಹೋಗಿದೆ. ನಿಮ್ಮ ಖಾತೆಗೆ ೧ ರೂ ಅದ್ರು ಬಂದಿದೇನಾ, ಹೇಳಿ. ಬರೀ ಸುಳ್ಳು ಹೇಳುವ ಕೆಲಸ ಬಿಜೆಪಿಯವರದ್ದು ‘

‘ ನಿರುದ್ಯೋಗ ನಿವಾರಣೆ ಮಾಡುತ್ತೇನೆಂದು ಹೇಳಿದ್ದ ಮೋದಿ ಎಷ್ಟು ಉದ್ಯೋಗ ಸೃಷ್ಡಿ ಮಾಡಿದ್ದಾರೆ ದಲಿತರ ಬುಡಕಟ್ಟು ಜನಾಂಗದ ಸಮಸ್ಯೆಗಳು ನಮ್ಮ ದೇಶದ ಮುಂದೆ ಇರುವ ಬಹುದೊಡ್ಡ ಸಮಸ್ಯೆಯಾಗಿದೆ. ನಗರ ಪ್ರದೇಶದಲ್ಲೂ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಅವುಗಳನ್ನು ಬಗೆಹರಿಸಲು ಮುಂದಾಗಿದ್ದೀರಾ ಮೋದಿ ಜೀ ‘ ಎಂದರು.

‘ ಮೋದಿಯವರೆ ನೀವು ಒಂದು ಘಂಟೆ‌ಕಾಲ ಲೋಕಸಭೆಯಲ್ಲಿ ಭಾಷಣ ಮಾಡಿದ್ರೀ, ಉದ್ಯೋಗ ಬಗ್ಗೆ, ರೈತರ ಬಗ್ಗೆ, ಮಾತನಾಡಲಿಲ್ಲ, ಅದ್ರೇ ಒಂದು ಘಂಟೆ ಕಾಲ ಬೇಜಾವಬ್ದಾರಿ ಭಾಷಣ ಮಾಡಿದ್ದೀರಿ. ಭಾಷಣ ಮಾಡಲು ನಿಮ್ಮ ಪ್ರಧಾನಿ ಮಾಡಿಲ್ಲ, ದೇಶಕ್ಕೆ ಏನೂ ಮಾಡುತ್ತರೆ ‘ ಎಂದು ಕೇಳಿದ್ದಾರೆ.

ಸಿಎಂ ಸಿದ್ದು ಗಾಡಿಯನ್ನು ಮುಂದೆ ನೋಡಿ ಚಾಲನೆ ಮಾಡುತ್ತಿದ್ದಾರೆ. ಅದ್ರೇ ಮೋದಿ ಅತ್ತ ಇತ್ತ ನೋಡಿ ಗಾಡಿ ಚಾಲನೆ ಮಾಡುತ್ತಿದ್ದೀರಿ ಹಾಗದ್ರೇ ಅಪಘಾತ ಅಗುವ ಸಂಭವ ಇರುತ್ತದೆ. ಸಿದ್ದರಾಮಯ್ಯ ನವರು ಮುಂದೆ ನೋಡಿ ಗಾಡಿ ಚಾಲನೆ ಮಾಡುತ್ತಿದ್ದು ರಾಜ್ಯವನ್ನು ಶಾಂತಿಯುತವಾಗಿ ಆಳ್ವಿಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹುಸಿ ಸುಳ್ಖುಗಳನ್ನು ನಿಮ್ಮ ಹಾಗೇ ನೀಡಲ್ಲ, ಹಾಗಾಗೀ ಮೋದಿಯವರೇ ಸಿದ್ದರಾಮಯ್ಯ ನವರ ಬಳಿ ಬಂದು ಪಾಠ ಕಲಿಯಿರಿ ‘ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com