ವೈದ್ಯರು ನೀಡಿದ್ದ ಇಂಜೆಕ್ಷನ್‌ಗೆ ಎರಡು ಹಸುಗೂಸುಗಳು ಬಲಿ : ಮೂವರ ಸ್ಥಿತಿ ಗಂಭೀರ

ಮಂಡ್ಯ : ವೈದ್ಯರು ನೀಡಿದ್ದ ಇಂಜೆಕ್ಷನ್‌ಗೆ ಎರಡು ಹಸುಗೂಸುಗಳು ಬಲಿಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಇನ್ನೂ ಐದು ಮಕ್ಕಳು ತೀವ್ರ ಅಸ್ವಸ್ಥರಾಗಿರುವುದಾಗಿ ತಿಳಿದುಬಂದಿದೆ.
ಮಂಡ್ಯದ ಚಿಂದಿಗಿರಿ ದೊಡ್ಡಿಯಲ್ಲಿ ಈ ಘಟನೆ ನಡೆದಿದೆ. ಮಕ್ಕಳ ಸಾವಿಗೆ ವೈದ್ಯರು ನೀಡಿರುವ ಇಂಜೆಕ್ಷನ್ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನ ಗಂಭೀರ ಸ್ಥಿತಿಯಲ್ಲಿರುವ ಮಕ್ಕಳನ್ನು ಮಂಡ್ಯದ ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರ್ಕಾರದ ವತಿಯಿಂದ ಮಂಡ್ಯದ ಚಿನ್ನಿಗಿರಿದೊಡ್ಡಿ ಗ್ರಾಮದಲ್ಲಿನ ಅಂಗನವಾಡಿಯಲ್ಲಿ 9 ಮಕ್ಕಳಿಗೆ ಪೆಂಟಾವೇಲೆಂಟ್‌ ಇಂಜೆಕ್ಷನ್‌ ನೀಡಲಾಗಿತ್ತು. ಆದರೆ ಇಂಜೆಕ್ಷನ್‌ ನೀಡದ ಬಳಿಕ ಒಂದೂವರೆ ತಿಂಗಳ ಎರಡು ಮಕ್ಕಳು ಮೃತಪಟ್ಟಿವೆ.
ಇನ್ನು ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಪಿ.ಎಲ್‌ ನಟರಾಜ್‌ ಹೇಳಿಕೆ ನೀಡಿದ್ದು, ಇದು ಕೇಂದ್ರ ಸರ್ಕಾರದಿಂದ ಬಂದಿರುವ ವ್ಯಾಕ್ಸಿನ್‌. ಈ ಘಟನೆ ಬಳಿಕ ಆ ಬ್ಯಾಚ್ ನ ಎಲ್ಲಾ ವ್ಯಾಕ್ಸಿನ್ ಸೀಜ್ ಮಾಡಲಾಗಿದೆ. ವ್ಯಾಕ್ಸಿನ್, ರಕ್ತದ ಮಾದರಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ, ತನಿಖಾ ತಂಡದ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ಯಾರದ್ದೇ ತಪ್ಪಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.