ಚುನಾವಣೆಗೆ ಕಿಚ್ಚನ Campaign : ಯುವ ಮತದಾರರಿಗೆ ಸುದೀಪ್ ಹೇಳಿದ್ದೇನು…?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಈ ಮಧ್ಯೆ ಎಲ್ಲಾ ಪಕ್ಷಗಳು ತಮ್ಮ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಿದೆ. ಜೊತಗೆ ಸ್ಟಾರ್‌ ಕಲಾವಿದರನ್ನು ಪ್ರಚಾರ ಕಾರ್ಯಕ್ಕೆ ಕರೆತರುವ ಕೆಲಸಕ್ಕೂ ಪ್ರಯತ್ನ ನಡೆಸಿದೆ.
ಈ ಬಾರಿ ಕಿಚ್ಚ ಸುದೀಪ್‌ ರಾಜಕೀಯಕ್ಕೆ ಇಳಿಯುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಜೊತೆಗೆ ಜೆಡಿಎಸ್‌ ಪರ ಪ್ರಚಾರ ಮಾಡುತ್ತಾರೆ ಎಂಬ ಮಾತೂ ಕೇಳಿಬಂದಿತ್ತು. ಆದರೆ ಇದೆಲ್ಲ ಬಿಟ್ಟು ಮತದಾನದ ಕುರಿತು ಕಿಚ್ಚ ಕ್ಯಾಂಪೇನ್ ಆರಂಭಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಹೆಚ್ಚು ಮಂದಿ ಯುವಕರು ಪಾಲ್ಗೊಳ್ಳಬೇಕು. ಎಲ್ಲಾ ಯುವಕರು ಮತದಾನ ಮಾಡುವಂತೆ ಕರೆ ನೀಡಿದ್ದಾರೆ.
ಉತ್ತಮ ಸಮಾಜ ನಿರ್ಮಾಣವಾಗಬೇಕೆಂದರೆ ಯುವಕರ ಪಾತ್ರ ಬಹುಮುಖ್ಯ. ಭ್ರಷ್ಟಾಚಾರ ಕಿತ್ತೆಸೆಯಲು ಪ್ರತಿಯೊಬ್ಬ ವ್ಯಕ್ತಿಯ ಮತ ಅತ್ಯಮೂಲ್ಯ. ಆದ್ದರಿಂದ ಮತದಾನ ಮಾಡಿ. ಯಾರ ಬಳಿ ವೋಟರ್‌ ಐಡಿ ಇಲ್ಲವೋ ಎಲ್ಲರೂ ವೋಟರ್‌ ಐಡ ಮಾಡಿಸಿ ಎಂದಿದ್ದಾರೆ.
ಜೊತೆಗೆ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾರ ನಿರ್ಣಾಯಕ ಪಾತ್ರ ವಹಿಸುತ್ತಾನೆ. ಈಗಲೇ ಮತದಾನಕ್ಕೆ ಹೆಸರು ನೋಂದಾಯಿಸಿಕೊಳ್ಳಿ ಎಂದು ಬಿ-ಪ್ಯಾಕ್‌ ಎಂಬ ಸಂಸ್ಥೆಯಿಂದ ಅಭಿಯಾನ ಆರಂಭಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com