ಮೋದಿಯದ್ದು ಏನಿದ್ದರೂ ಒನ್‌ ವೇ, ಅವರು ಹೇಳಬೇಕು, ಜನ ಕೇಳಬೇಕು ಅಷ್ಟೇ : ಪ್ರಿಯಾಂಕ್‌ ಖರ್ಗೆ

ಕಲಬುರ್ಗಿ: ಪ್ರಧಾನಿ ಮೋದಿಯದ್ದು ಏನಿದ್ದರೂ ಒನ್‌ ವೇ. ಅವರು ಹೇಳಬೇಕು, ದೇಶದ ಜನ ಕೇಳಬೇಕು ಅಷ್ಟೇ ಎಂದು ಪ್ರವಾಸೋದ್ಯಮ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಮಾಜಿ ಪ್ರಧಾನಿ ಮನಮೋಹನಸಿಂಗ್‌ರನ್ನು  ಮೌನ ಮೋಹನಸಿಂಗ್ ಎಂದು ಮೋದಿ ಲೇವಡಿ ಮಾಡುತ್ತಾರೆ. ಆದರೆ ಇವರೆಂದು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ ಹೇಳಲಿ ನೋಡೋಣ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ತಮಗಿಷ್ಟ ಬಂದ ಪತ್ರಕರ್ತರನ್ನು ಕೂಡಿಸಿಕೊಂಡು ಸಂವಾದ ನಡೆಸುವುದಲ್ಲ. ಧೈರ್ಯವಿದ್ದರೆ ಎಲ್ಲ ಮಾಧ್ಯಮದವರನ್ನು ಎದುರಿಗಿಟ್ಟುಕೊಂಡು ಮೋದಿ ಗೋಷ್ಠಿ ನಡೆಸಲಿ. ಮೋದಿ ಮಾತನಾಡುತ್ತಾರೆ ಎಂದರೇ ನಾನೇ ಮಾಧ್ಯಮ ಗೋಷ್ಠಿ ಆಯೋಜಿಸುತ್ತೇನೆ. ದೆಹಲಿ ಅಥವಾ ಬೆಂಗಳೂರು ಎಲ್ಲಿ ಬೇಕಾದರೂ ನಾನೇ ಮಾಧ್ಯಮ ಗೋಷ್ಠಿ ನಡೆಸುತ್ತೇನೆ. ತಾಕತ್ತಿದ್ದರೆ ಅವರು ಮಾಧ್ಯಮಗಳೊಂದಿಗೆ ಮಾತನಾಡಲಿ ಎಂದಿದ್ದಾರೆ.

ಬರೀ ಭಾಷಣಗಳನ್ನು ಮಾಡದೆ, ಟ್ವೀಟ್ ಮಾಡದೆ ಮಾಧ್ಯಮದವರ ಮುಂದೆಯ ಮಾತನಾಡಬೇಕು. ಸತ್ಯವಂತರಾಗಿದ್ದರೆ ಮಾತನಾಡಲಿ ನೋಡೋಣ ಎಂದು  ಪ್ರಧಾನಿ ಮೋದಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com