ಬಾಬ್ರಿ ಮಸೀದಿ ಜಾಗವನ್ನು ಯಾರಿಗೂ ಮಾರಲ್ಲ, ಉಡುಗೊರೆಯಾಗಿಯೂ ನೀಡಲ್ಲ : AIMPLB

ಹೈದರಾಬಾದ್‌ : ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದ ಸಂಬಂಧ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಳೆಯ ನಿಲುವನ್ನು ಪುನರುಚ್ಛರಿಸಿದ್ದು, ಮಸೀದಿ ನಿರ್ಮಾಣಕ್ಕೆಂದು ಬಿಟ್ಟರುವ ಜಾಗವನ್ನು ಯಾರಿಗೂ ಮಾರುವುದಿಲ್ಲ ಅಥವಾ ಉಡುಗೊರೆಯಾಗಿ ನೀಡುವುದಿಲ್ಲ ಎಂದಿದೆ.
ಹೈದರಾಬಾದ್‌ನಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯಕಾರಿ ಸಭೆ ನಡೆದಿದ್ದು, ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಈ ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡುವ  ತೀರ್ಪಿಗೆ ತಾವು ಬದ್ದರಾಗಿರುವುದಾಗಿಯೂ ಸಮಿತಿ ಅಧ್ಯಕ್ಷರು ಹೇಳಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com