ಹುಡುಗಿಯರೂ Beer ಕುಡಿಯಲು ಆರಂಭಿಸಿದ್ದು, ಭಯ ಮೂಡಿಸಿದೆ : ಮನೋಹರ್ ಪರಿಕರ್

‘ ಹುಡುಗಿಯರೂ ಸಹ ಬಿಯರ್ ಕುಡಿಯಲು ಪ್ರಾರಂಭಿಸಿದ್ದಾರೆ, ಇದು ನನ್ನಲ್ಲಿ ನಿಜಕ್ಕೂ ಭಯ ಮೂಡಿಸಿದೆ, ನಮ್ಮ ಸಹಿಷ್ಣುತೆಯ ಮಿತಿಯನ್ನು ಮೀರಲಾಗುತ್ತಿದೆ ‘ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅಭಿಪ್ರಾಯ ಪಟ್ಟಿದ್ದಾರೆ.

ಗೋವಾ ಶಾಸಕಾಂಗ ಇಲಾಖೆ ಆಯೋಜಿಸಿದ್ದ ರಾಜ್ಯ ಯುವ ಸಂಸತ್ತಿನ ಸಭೆಯಲ್ಲಿ ಮಾತನಾಡಿದ ಮನೋಹರ್ ಪರಿಕರ್ ‘ ನಾನು ಎಲ್ಲರ ಬಗ್ಗೆಯೂ ಈ ಮಾತನ್ನು ಹೇಳುತ್ತಿಲ್ಲ. ಇಲ್ಲಿ ಕುಳಿತಿರುವವರೆಲ್ಲರಿಗೂ ಇದನ್ನು ಅನ್ವಯಿಸಿ ಹೇಳುತ್ತಿಲ್ಲ ‘ ಎಂದಿದ್ದಾರೆ.

‘ ಗೋವಾದಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಮಾರಾಟ ಸದ್ಯ ನಿಯಂತ್ರಣದಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗಲಿದೆ, ಆದರೆ ಪೂರ್ತಿ ನಿಲ್ಲುತ್ತದೆ ಎನ್ನುವ ನಂಬಿಕೆ ನನಗಿಲ್ಲ. ಕಾಲೇಜುಗಳಲ್ಲಿ ಮಾದಕ ವಸ್ತುಗಳ ಮಾರಟದ ಹಾವಳಿ ಹೆಚ್ಚಾಗಿಲ್ಲ ‘ ಎಂದು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com