Kohli ನಾಯಕತ್ವದ ಬಗ್ಗೆ Afridi ಅಭಿಪ್ರಾಯ : ಪಾಕ್ ಕ್ರಿಕೆಟರ್ ಹೇಳಿದ್ದೇನು..?

ವಿಶ್ವದ ನಂ.1 ಏಕದಿನ ಬ್ಯಾಟ್ಸಮನ್ ಆಗಿರುವ ವಿರಾಟ್, ಟೀಮ್ ಇಂಡಿಯಾದ ನಾಯಕರಾಗಿಯೂ ಯಶಸ್ಸನ್ನು ಕಾಣುತ್ತಿದ್ದಾರೆ. ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ಜಯಗಳಿಸಿದೆ.

ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಹಾಗೂ ನಾಯಕತ್ವದ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸಮನ್, ಆಲ್ರೌಂಡರ್ ಶಾಹಿದ್ ಆಫ್ರಿದಿ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ.

ಕೊಹ್ಲಿಯನ್ನು ಮುಕ್ತ ಕಂಠದಿಂದ ಹೊಗಳಿರುವ ಪಾಕ್ ಆಲ್ರೌಂಡರ್ ಅಫ್ರಿದಿ, ‘ ವಿರಾಟ್ ಭಾರತ ತಂಡವನ್ನು ಚೆನ್ನಾಗಿ ಮುನ್ನಡೆಸುತ್ತಿದ್ದಾರೆ. ಭಾರತದ ನಾಯಕನ ಸ್ಥಾನದಲ್ಲಿ ಕೊಹ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಟ್ರೋಲ್ಡ್ ಅಗ್ರೆಶನ್ ತುಂಬಾ ಮುಖ್ಯ. ಪ್ರತಿಯೊಬ್ಬರಲ್ಲಿಯೂ ಇಂತಹ ಆಕ್ರಮಣಶೀಲತೆ ಇರಬೇಕು, ಅದು ವಿರಾಟ್ ಅವರಲ್ಲಿದೆ ‘ ಎಂದು ಹೇಳಿದ್ದಾರೆ.

 

Leave a Reply

Your email address will not be published.