ಗಂಟಲಿಗೆ ಕಾಯಿಚೂರು ಸಿಕ್ಕಿ ಉಸಿರುಗಟ್ಟಿ ಸಾವಿಗೀಡಾದ ಶಿಕ್ಷಕಿ…!!

ಚಿಕ್ಕಮಗಳೂರು : ಗಂಟಲಿನಲ್ಲಿ ಕಾಯಿಚೂರು ಸಿಲುಕಿ ಶಿಕ್ಷಕಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನಲ್ಲಿ ನಡೆದಿದೆ. ಮೃತ ಶಿಕ್ಷಕಿಯನ್ನು ನವ್ಯಶ್ರೀ (28) ಎಂದು ಹೆಸರಿಸಲಾಗಿದೆ.

ಹಿರೇಮಗಳೂರು ನಿವಾಸಿಯಾಗಿರುವ ನವ್ಯಶ್ರೀ, ಸಂಜೀವಿನಿ ಶಾಲೆಯ ಶಿಕ್ಷಕಿಯಾಗಿದ್ದು, ಶಾಲೆಯ ಪಕ್ಕದಲ್ಲಿರುವ ಸಾಲುಮರದಮ್ಮ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬಳಿಕ ತೆಂಗಿನ ಕಾಯಿ ಒಡೆದು ತಿನ್ನುತ್ತಿದ್ದರು. ಈ ವೇಳೆ ತೆಂಗಿನ ಕಾಯಿ ಚೂರು ಗಂಟಲಿಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ನವ್ಯಶ್ರೀ ಮೃತದೇಹವನ್ನು ಹೋಲಿಕ್ರಾಸ್‌ ಆಸ್ಪತ್ರೆಗೆ ರವಾನಿಸಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com