Bangalore : ಕರೆ ಮಾಡಿ ಉದ್ಯಮಿಗಳನ್ನು ಮನೆಗೆ ಕರೆಸಿಕೊಳ್ತಿದ್ಲು, ಆಮೇಲೆ…….!!!

ಬೆಂಗಳೂರು : ಶ್ರೀಮಂತರು, ಉದ್ಯಮಿಗಳ ನಂಬರ್‌ ಹುಡುಕಿ ಪಡೆದುಕೊಂಡು, ಅವರಿಗೆ ಕರೆ ಮಾಡಿ ತನ್ನ ಬಲೆಯಲ್ಲಿ ಬೀಳಿಸಿಕೊಂಡು ರಹಸ್ಯ ದಾಖಲೆಗಳನ್ನು ಕದಿಯುತ್ತಿದ್ದ ಆರೋಪಿಯನ್ನು ನಗರದ ಅಮೃತಹಳ್ಳಿಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಮಂಜುನಾಥ್‌ ಎಂದು ಹೆಸರಿಸಲಾಗಿದೆ. ಪ್ರಮುಖ ಆರೋಪಿ ಆಯೇಷಾ ನಾಪತ್ತೆಯಾಗಿದ್ದಾಳೆ.

ಮಂಜುನಾಥ್‌ ಉದ್ಯಮಿಗಳ ನಂಬರ್‌ ಕಲೆಕ್ಟ್ ಮಾಡಿ ಆಯೇಷಾಗೆ ನೀಡುತ್ತಿದ್ದ. ಆಕೆ ಉದ್ಯಮಿಗಳಿಗೆ ಕರೆ ಮಾಡಿ ಅವರನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದು, ಅವರೊಂದಿಗೆ ಸಂಪರ್ಕ ಬೆಳೆಸುತ್ತಿದ್ದಳು. ಮಂಜುನಾಥ್‌ ಅವರಿಬ್ಬರ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದು, ಇದನ್ನು ತೋರಿಸಿ ಉದ್ಯಮಿಗಳಿಗೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದರು.

ಇವರಿಬ್ಬರಿಂದ ವಂಚನೆಗೊಳಗಾದ ಉದ್ಯಮಿಯೊಬ್ಬರು  ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ ಪೊಲೀಸರು ಮಂಜುನಾಥ್‌ನನ್ನು ಬಂಧಿಸಿದ್ದಾರೆ. ಆಯೇಷಾಳಿಗಾಗಿ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com