ಕಾಂಗ್ರೆಸ್‌ಗಾಗಿ, ಜನರಿಗಾಗಿ ಗಾಂಧಿ ಕುಟುಂಬ ರಕ್ತ ನೀಡಿದೆ : ಅಂಬರೀಶ್‌

ಬಳ್ಳಾರಿ : ಜನಾಶಿರ್ವಾದ ಯಾತ್ರೆಯ ವೇಳೆ ರೆಬಲ್‌ ಸ್ಟಾರ್‌ ಅಂಬರೀಶ್‌ ಕಾಂಗ್ರೆಸ್‌ ಸರ್ಕಾರವನ್ನು ಹೊಗಳಿದ್ದಾರೆ. ಕಾಂಗ್ರೆಸ್ ಪಕ್ಷ ಭಾರತದ ನಂಬರ್ -1 ಪಕ್ಷ. ಜನರಿಗೆ ಸಾಕಷ್ಟು ಕೊಡುಗೆ ನೀಡಿದ ಪಕ್ಷ. ಕಾಂಗ್ರೆಸ್‌ ಪಕ್ಷಕ್ಕೆ ಜನ ಸದಾ ಬೆಂಬಲಿಸಿದ್ದೀರಿ. ನಿಮ್ಮ ಬೆಂಬಲ ಇದೇ ರೀತಿ ಇರಲಿ ಎಂದಿದ್ದಾರೆ.

ಇದೇ ವೇಳೆ ಕೊಪ್ಪಳಕ್ಕೆ ರಾಹುಲ್ ಗಾಂಧಿ ಆಗಮನದ ಕುರಿತು ಮಾತನಾಡಿದ ಅವರು, ಸೋನಿಯಾಗಾಂಧಿ ಅವರ ಪುತ್ರ ರಾಹುಲ್ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಜನ ಸೋನಿಯಾಗಾಂಧಿಯವರನ್ನು ಗೆಲ್ಲಿಸಿದವರು. ಜನರೇನು ದಡ್ಡರಲ್ಲ, ಕಾಂಗ್ರೆಸ್ ಪಕ್ಷಕ್ಕಾಗಿ ಗಾಂಧಿ ಕುಟುಂಬ ರಕ್ತ ನೀಡಿದೆ. ಕಾಂಗ್ರೆಸ್ ನ ಭದ್ರಕೋಟೆಯ ಜಿಲ್ಲೆ ಬಳ್ಳಾರಿ ಎಂದಿದ್ದಾರೆ.

ಇದೇ ವೇಳೆ ಮನ್ ಕೀ ಬಾತ್ ಬಗ್ಗೆ ವ್ಯಂಗ್ಯವಾಡಿದ ಅಂಬರೀಶ್‌, ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗ ಜಾರಿ ಮಾಡಬೇಕಾದ ಯೋಜನೆಯನ್ನು ವಿರೋಧ ಮಾಡಿದ್ದರು. ಆದರೆ ಇಂದು ಅವರೇ ಜಾರಿಗೆ ತರುತ್ತಿದ್ದಾರ. ಅವರ ಬುದ್ದಿ ಎಂತದ್ದು ಎಂದು ಇದರಿಂದ ತಿಳಿಯುತ್ತದೆ ಎಂದಿದ್ದಾರೆ.

 

Leave a Reply

Your email address will not be published.