ಬಳ್ಳಾರಿಯಲ್ಲಿ ಮೊಳಗಿದ ಕಾಂಗ್ರೆಸ್‌ ಚುನಾವಣಾ ರಣಕಹಳೆ : PM ವಿರುದ್ಧ ಗುಡುಗಿದ CM

ಬಳ್ಳಾರಿ : ಹೊಸಪೇಟೆಯಲ್ಲಿ ಚುನಾವಣಾ ಪ್ರಚಾರದ ರಣಕಹಳೆ ಮೊಳಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬಳ್ಳಾರಿಗೆ ಆಗಮಿಸಿದ್ದು, ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ, ಕ್ರೈಂ ನಲ್ಲಿ ಉತ್ತರ ಪ್ರದೇಶ ಮೊದಲು, ನಂತರ ರಾಜಸ್ಥಾನ, ಬಿಹಾರ್, ಹರಿಯಾಣ ರಾಜ್ಯಗಳಿವೆ. ಆದರೆ ಎಲ್ಲರೂ ಕರ್ನಾಟಕದ ಕಡೆ ಬೆಟ್ಟು ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರೆ ನೀವು ಎಷ್ಟೇ ಸುಳ್ಳು ಹೇಳಿದರೂ ಕರ್ನಾಟಕ ಜನ ನಂಬಲ್ಲ. ಅಮಿತ್‌ ಶಾ, ಯಡಿಯೂರಪ್ಪ ಜೈಲಿಗೆ ಹೋಗಿದ್ದನ್ನು ಮರೆತಂತಿದೆ.

ಇನ್ನು ನಿಮ್ಮದೇ ರಾಜ್ಯ ಗುಜರಾತ್‌ನಲ್ಲಿ ಗೋದ್ರಾ ಹತ್ಯಾಕಾಂಡವಾಗಿತ್ತು. ಅದೂ ಇವರಿಗೆ ಮರೆತುಹೋದಂತಿದೆ. ಕೋಮುವಾದ ಹುಟ್ಟಿಸುವುದೇ ನಿಮ್ಮ ಕೆಲಸ.  ಧರ್ಮ ಧರ್ಮಗಳ ಮಧ್ಯೆ, ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚುವುದನ್ನು ಬಿಡಿ. ದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ. ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಶತಸಿದ್ಧ. ಬಳ್ಳಾರಿ ಕಾಂಗ್ರೆಸ್ ಭದ್ರ ಕೋಟೆ, ಇಲ್ಲಿಂದ ಸೋನಿಯ ಆಯ್ಕೆಯಾಗಿದ್ದರು. ಆನಂದ್ ಸಿಂಗ್, ನಾಗೇಂದ್ರ, ಭೀಮಾನಾಯ್ಕ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರು ಬಂದಿರುವುದು, ಪಕ್ಷಕ್ಕೆ ಬಲ ಬಂದಿದೆ. ಇದರಿಂದ ಬಳ್ಳಾರಿಯ 9 ಕ್ಷೇತ್ರ ಕೈ ವಶವಾಗುತ್ತದೆ. ಬಿಜೆಪಿ ಮನುಷ್ಯತ್ವ ಇಲ್ಲದಂತ ಪಕ್ಷ, ಕೋಮುದಳ್ಳುರಿಯ ಪಕ್ಷ, ಢೋಂಗಿ ಪಕ್ಷ ಎಂದು ಅಣಕವಾಡಿದ್ದಾರೆ.

ಮೋದಿಯವರೇ ಆನಂತ್ ಕುಮಾರದ ಹೆಗ್ಡೆ ಒಬ್ಬ ನಾಲಾಯಾಕ್ ಮಂತ್ರಿ. ಸಂವಿಧಾನ ಬದಲಾವಣೆ ಮಾಡಲು ಮುಂದಾಗಿರುವ ಮಂತ್ರಿ. ಅಲ್ಪಸಂಖ್ಯಾತರನ್ನು ವಿರೋಧ ಮಾಡುವ ಪಕ್ಷ ನಿಮ್ಮದು. ಮೋದಿಯವರೇ ಕರ್ನಾಟಕದಿಂದ ಕಾಂಗ್ರೆಸನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ಇಡೀ ಭಾರತದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ. ರಾಹುಲ್‌ಗಾಂಧಿ ಪ್ರಧಾನಿ ಆಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.