ರಾಜ್ಯದಲ್ಲಿ BJP ಓವೈಸಿಯೊಂದಿಗೆ ಕೈ ಜೋಡಿಸಿದೆ ಎಂಬುದು Joke of the year : ಜಾವಡೇಕರ್‌

ತುಮಕೂರು : ರಾಜ್ಯದಲ್ಲಿ ಬಿಜೆಪಿ ಓವೈಸಿಯೊಂದಿಗೆ ಕೈ ಜೋಡಿಸಿದೆ ಎಂಬುದು ಜೋಕ್‌ ಆಫ್‌ ದಿ ಇಯರ್‌. ಓವೈಸಿಗೆ ಬೆಂಬಲ ನೀಡುತ್ತಿರುವುದು ಕಾಂಗ್ರೆಸ್‌ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಹೈದರಾಬಾದ್ ನ ಕಾರ್ಪೋರೇಷನ್ ನಲ್ಲಿ ಓವೈಸಿಯೊಂದಿಗೆ ಕಾಂಗ್ರೆಸ್ ಕೈ‌ಜೋಡಿಸಿದೆ. ನಾವು ಒವೈಸಿಯೊಂದಿಗೆ ಇದ್ದೇವೆ ಎಂಬುದು ಹಾಸ್ಯಾಸ್ಪದ. ಸಂಸತ್ತಿನಲ್ಲಿ ಕಾಂಗ್ರೆಸ್, ಪ್ರಧಾನಿಗಳ ಭಾಷಣ ನಿಲ್ಲಿಸಲು ಪ್ರಯತ್ನಿಸಿದೆ. ಭಾರತದ ಇತಿಹಾಸದಲ್ಲಿ ಇದೇ ಮೊದಲು ಈ ರೀತಿಯಾಗಿದ್ದು, ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಮಾಡಿದ ಅವಮಾನ ಇದು. ಕರ್ನಾಟಕದಲ್ಲಿ ಕೂಡಾ ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಳೆದ ನಾಲ್ಕುವರೆ ವರ್ಷದಲ್ಲಿ ಕರ್ನಾಟಕದಲ್ಲಿ 25 ರಾಜಕೀಯ ಪ್ರೇರಿತ ಕೊಲೆಯಾಗಿದೆ. 3000 ರೈತರ ಆತ್ಮಹತ್ಯೆಯಾಗಿದೆ. ರಾಜ್ಯಕ್ಕೆ ಬರುವ ರಾಹುಲ್ ಗಾಂಧಿ ಇದಕ್ಕೆ ಉತ್ತರ ನೀಡಲಿ. ಕಾಂಗ್ರೆಸ್ ಎಸ್ ಡಿ ಪಿ ಐ ಹಾಗೂ ಪಿಎಫ್ ಐ ಜೊತೆ ಸಂಪರ್ಕ ಹೊಂದಿದೆ. ಹಾಗಾಗಿ ಆ ಭಯೋತ್ಪಾದಕರ ಕೇಸನ್ನು ವಾಪಸ್ ಪಡೆದಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com