ಬಿಕಿನಿ ತೊಟ್ಟ ಸಮಂತಾ : ಟ್ರೋಲಿಗರಿಗೆ ತಕ್ಕ ಉತ್ತರ ಕೊಟ್ಟ ಅಕ್ಕಿನೇನಿ ಕುಟುಂಬದ ಸೊಸೆ

ಇತ್ತೀಚೆಗಷ್ಟೇ ಮದುವೆಯಾಗಿ ಅಕ್ಕಿನೇನಿ ಕುಟುಂಬದ ಸೊಸೆಯಾಗಿರುವ ಸಮಂತಾ ಮತ್ತೆ ಸುದ್ದಿಯಾಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸಮಂತಾ ಬಿಕಿನಿ ಫೋಟೋವೊಂದನ್ನು ಅಪ್‌ಲೋಡ್‌ ಮಾಡಿದ್ದು, ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಮುದ್ರದ ದಡದಲ್ಲಿ ಬಿಕಿನಿ ತೊಟ್ಟು ಉಯ್ಯಾಲೆ ಮೇಲೆ ಸಮಂತಾ ಮಲಗಿದ್ದು, ಈ ಫೋಟೋಗೆ ಅನೇಕರು ಹೊಗಳಿದ್ದರೆ ಇನ್ನು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನೇಕರು ನೆಗೆಟಿವ್‌ ಕಮೆಂಟ್‌ಗಳನ್ನು ಮಾಡಿದ್ದು, ಇದು ಅಸಭ್ಯವಾಗಿದೆ ಎಂದು ಕೆಲವರು ಕಮೆಂಟ್‌ ಮಾಡಿದ್ದರೆ, ಇನ್ನು ಕೆಲವರು ನಾಗಾರ್ಜುನ, ನಾಗಚೈತನ್ಯ ಅವರಿಗೆ ಇಲ್ಲದ ಸಮಸ್ಯೆ ನಿಮಗ್ಯಾಕೆ ಎಂದೂ ಹೇಳಿದ್ದಾರೆ.

ಇನ್ನು ತಮ್ಮ ವಿರುದ್ಧದ ಟ್ರೋಲ್‌ಗಳಿಗೆ ಸಮಂತಾ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ‘ ಬೇರೆಯವರು ಯಾವುದನ್ನು ಮಾಡಬಾರದು ಎಂದು ನಿರ್ಧರಿಸುತ್ತಾರೆಯೋ, ಒಬ್ಬ ಧೈರ್ಯವಂತ ಹೆಣ್ಣು ಅದನ್ನೇ ಮಾಡಲು ನಿರ್ಧರಿಸುತ್ತಾಳೆ ‘ ಎಂದಿದ್ದು, ನನ್ನ ಬದುಕು ಹೇಗೆ ಬದುಕಬೇಕು ಎಂಬುದನ್ನು ಬೇರೆಯವರಿಂದ ಕಲಿಯಬೇಕಿಲ್ಲ ಎಂಬ ಅರ್ಥದಲ್ಲಿ ಉತ್ತರ ನೀಡಿದ್ದಾರೆ.

ಸಮಂತಾ ಸದ್ಯಕ್ಕೆ ರಂಗಸ್ಥಲಂ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com