ಹಲ್ಲು ನೋವಿಗೆ ಸರಳ ಮನೆ ಮದ್ದು : ಹೀಗೆ ಮಾಡಿದ್ರೆ ಒಂದೇ ದಿನದಲ್ಲಿ ನೋವು ಮಂಗಮಾಯ !

ಹಲ್ಲು ನೋವು ಬಂತೆಂದರೆ ಮುಗಿಯಿತು. ಏನೇ ಮಾಡಿದರೂ ಅದು ಸುಲಭವಾಗಿ ಹೋಗುವುದಿಲ್ಲ. ಹಲ್ಲು ನೋವಿನಷ್ಟು ಸಂಕಟ ನೀಡುವ ನೋವು ಮತ್ತೊಂದು ಇಲ್ಲವೆನ್ನಬಹುದು. ಹಲ್ಲು ನೋವಿನ ಸಮಯದಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಹಲ್ಲು ನೋವು ಹೆಚ್ಚಾದಾಗ ತಲೆನೋವು, ಜ್ವರ ಸಹ ಕಾಣಿಸಿಕೊಳ್ಳಬಹುದು. ಹಲ್ಲು ನೋವಿಗೆ ಪ್ರಮುಖವಾಗಿ ಬ್ಯಾಕ್ಟೀರಿಯಾ ಸೋಂಕು, ವಸಡಿನ ರೋಗ, ದುರ್ಬಲ ಹಲ್ಲುಗಳು ಪ್ರಮುಖ ಕಾರಣವಾಗಿದೆ.

ಬಾಲ್ಯದಲ್ಲಿ ಇರುವ ಹಲ್ಲುಗಳು ಕಿತ್ತು ಹೋಗಿ ಹೊಸ ಹಲ್ಲುಗಳು ಮೂಡಿ ಬರುತ್ತದೆ. ಇದರ ಬಳಿಕ ಬೆಳೆಯುತ್ತಾ ಇರುವಂತೆ ಯೌವನದಲ್ಲಿ ಕೊನೆಯ ಹಲ್ಲು ಬರುತ್ತದೆ. ಆದರೆ ಇದಕ್ಕೆ ಹೊರಬರಲು ಜಾಗವಿಲ್ಲದೆ ಇರುವ ಕಾರಣದಿಂದ ತುಂಬಾ ನೋವನ್ನು ಉಂಟು ಮಾಡುತ್ತದೆ.

ಆದರೆ ಈ ನೋವಿನೊಂದಿಗೆ ಸಂಪೂರ್ಣ ಹಲ್ಲುನೋವನ್ನು ನಿವಾರಣೆ ಮಾಡಲು ಮನೆಮದ್ದನ್ನು ಬಳಸಿಕೊಳ್ಳುವುದು ಹೇಗೆ ಎಂಬ ಕುರಿತು ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು
ಬೆಳ್ಳುಳ್ಳಿ ರಸ 2-3 ಚಮಚ
ಕಪ್ಪು ಉಪ್ಪು ಒಂದು ಚಿಟಿಕೆ

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎನ್ನುವಂತಹ ಉರಿಯೂತ ಶಮನಕಾರಿ ಗುಣವಿದೆ. ಇದು ವಸಡಿನ ಊತವನ್ನು ಕಡಿಮೆ ಮಾಡಿ ಹಲ್ಲಿನ ನೋವನ್ನು ನಿವಾರಿಸುತ್ತದೆ.

ಕಪ್ಪು ಉಪ್ಪು….
ಕಪ್ಪು ಉಪ್ಪಿನಲ್ಲಿ ಇರುವಂತಹ ನೈಸರ್ಗಿಕ ನಂಜು ನಿರೋಧಕದೊಂದಿಗೆ ಸೋಡಿಯಂ ಇದೆ. ಇದು ಹಲ್ಲಿನಲ್ಲಿ ಬ್ಯಾಕ್ಟೀರಿಯಾದಿಂದ ಆಗುವಂತಹ ಸೋಂಕನ್ನು ನಾಶ ಮಾಡಿ ನೋವು ಕಡಿಮೆಮಾಡುತ್ತದೆ.
ಒಂದು ಪಿಂಗಾಣಿಗೆ ಬಟ್ಟಲಿಗೆ ಬೆಳ್ಳುಳ್ಳಿ, ಕಪ್ಪು ಉಪ್ಪನ್ನು ಹಾಕಿಕೊಳ್ಳಿ.ಇದನ್ನು ಸರಿಯಾಗಿ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ನೋವಿರುವ ಜಾಗಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ನೋವು ಕಡಿಮೆಯಾಗುವ ತನಕ ಪ್ರತೀ ದಿನ ಹಚ್ಚಿಕೊಂಡರೆ ಹಲ್ಲು ನೋವು ಮಾಯವಾಗುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com