SHIVAMOGGA : 500 ರೂ ಮುಖಬೆಲೆಯ ನಕಲಿ ನೋಟು ಚಲಾಯಿಸಿತ್ತಿದ್ದ ಇಬ್ಬರ ಬಂಧನ

ಶಿವಮೊಗ್ಗ : 500 ರೂ ಮುಖಬೆಲೆಯ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಜಾಲವನ್ನು ಶಿವಮೊಗ್ಗ ಪೊಲೀಸರು ಪತ್ತೆ ಮಾಡಿದ್ದಾರೆ.

ಬಂಧಿತರನ್ನು ಶಿವಮೊಗ್ಗದ ಟಿಪ್ಪುನಗರದ ಅಮ್ಜದ್‌ ಪಾಷಾ ಹಾಗೂ ಮೋಹಿನ್ ಖಾನ್‌ ಎಂದು ಹೆಸರಿಸಲಾಗಿದೆ. ಇವರ ತಂಡ ಶಿವಮೊಗ್ಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ಐನೂರು ರೂ ಮುಖಬೆಲೆಯ 350ಕ್ಕೂ ಹೆಚ್ಚು ನಕಲಿ ನೋಟುಗಳನ್ನ ಚಲಾವಣೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣ ಸಂಬಂದ ಭದ್ರಾವತಿಯ ತೌಸಿಫ್‌ ಹಾಗೂ ಬೆಂಗಳೂರಿನ ಇಮ್ರಾನ್‌ ನಾಪತ್ತೆಯಾಗಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ತಂಡ ಪಶ್ಚಿಮ ಬಂಗಾಳದ ವ್ಯಕ್ತಿಗೆ 70 ಸಾವಿರ ರೂ ಅಸಲಿ ನೋಟು ನೀಡಿ 2 ಲಕ್ಷ ಖೋಟಾ ನೋಟು ಪಡೆದು ತಂದು ಚಲಾವಣೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

Leave a Reply

Your email address will not be published.