ರಾಹುಲ್‌ ಗಾಂಧಿ ಕಾಲಿಟ್ಟಲೆಲ್ಲ ಕಾಂಗ್ರೆಸ್‌ ಸುಟ್ಟು ಹೋಗುತ್ತದೆ : ಜನಾರ್ಧನ ರೆಡ್ಡಿ

ಕೊಪ್ಪಳ : ರಾಹುಲ್‌ ಗಾಂಧಿ ಕಾಲಿಟ್ಟಲೆಲ್ಲ ಕಾಂಗ್ರೆಸ್‌ ಪಕ್ಷ ಸುಟ್ಟು ಭಸ್ಮವಾಗುತ್ತದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಗಂಗಾವತಿಯಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಿದ ರೆಡ್ಡಿ, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದು, ನಾಳೆ ಕೊಪ್ಪಳಕ್ಕೆ ಆಗಮಿಸುತ್ತಿರುವ ರಾಹುಲ್‌ಗಾಂಧಿ ಕುರಿತು ವ್ಯಂಗ್ಯ ಮಾಡಿದ್ದಾರೆ.

ದೇಶದ ಅಲ್ಲಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ. ರಾಹುಲ್‌ ಆಗಮನದಿಂದ ಅದೂ ಇಲ್ಲದಂತಾಗುತ್ತದೆ. ರಾಜ್ಯಕ್ಕೆ ರಾಹುಲ್ ಬಂದ ವೇಳೆ ದೇವಾಲಯಕ್ಕೆ ಹೆಚ್ಚು ಹೋಗುತ್ತಿದ್ದಾರೆ. ಇದಕ್ಕೆ ಬಿಜೆಪಿಯವರೇ ಕಾರಣ. ಇಲ್ಲದಿದ್ದರೆ ರಾಹುಲ್‌ ಎಂದಿಗೂ ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ. ನಮ್ಮಿಂದ ಇಷ್ಟಾದರೂ ಒಳ್ಳೆ ಬುದ್ದಿ ಕಲಿತಿದ್ದಾರಲ್ಲ ಅದೇ ಸಂತೋಷ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com