ಮೋದಿಗೆ ಸವಾಲೆಸೆಯುವ ಸಾಮರ್ಥ್ಯವಿರುವ ಏಕೈಕ ವ್ಯಕ್ತಿ ಸಿದ್ದರಾಮಯ್ಯ….!

ಹರಿಹರ : ಪ್ರಧಾನಿ ಮೋದಿಗೆ ಸವಾಲೆಸೆಯುವ ಹಾಗೂ ಅವರಿಗೆ ಸರಿಸಮನಾಗಿ ನಿಲ್ಲುವ ವ್ಯಕ್ತಿ ಇದ್ದರೆ ಅದು ಸಿಎಂ ಸಿದ್ದರಾಮಯ್ಯ ಎಂದು ಕಾಗಿನೆಲೆ ಕನಕ ಪೀಠದ ನಿರಂಜನ ಸ್ವಾಮೀಜಿ ಹೇಳಿದ್ದಾರೆ.

ಹರಿಹರದಲ್ಲಿ ನಡೆದ ಕಾರ್ಯಕ್ರಮವೊಂದರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲುಮತ ಸಮುದಾಯದವರೆಲ್ಲ ಒಂದಾಗಿದ್ದರೆ ಸಿದ್ದರಾಮಯ್ಯನವರು ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಲು ಸಾಧ್ಯವಾಗುತ್ತದೆ. ಸಿದ್ದರಾಮಯ್ಯನವರು ಧ್ವಜ ಹಾರಿಸಬೇಕು. ಅದನ್ನು ನಾವು ನೋಡಬೇಕು. ಮೋದಿಗೆ ತಿರುಗೇಟು ನೀಡುವ ಸಾಮರ್ಥ್ಯವಿರುವ ಏಕೈಕ ವ್ಯಕ್ತಿ ಎಂದರೆ ಅದು ಸಿದ್ದರಾಮಯ್ಯ ಮಾತ್ರ. ಕೋಳಿ ಎಲ್ಲಾ ಕೇರಿಗಳಿಗೆ ಹೋಗಿ ಕಾಳು ಕಡಿ ತಿಂದು ಬರುತ್ತದೆ. ಆದರೆ ಮೊಟ್ಟೆ ಇಡುವುದು ಮಾತ್ರ ಮಾಲೀಕನ ಮನೆಯಲ್ಲೇ. ಅದೇ ರೀತಿ ನಾವು ಮನೆ ಮಾಲೀಕನಾದ ಸಿದ್ದರಾಮಯ್ಯರನ್ನು ಮತ್ತೆ ಸಿಎಂ ಮಾಡಬೇಕೆಂದು ಕರೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com