ಶುದ್ಧೀಕರಣ ಮಾಡ್ತೀನಿ ಅಂದ ಢೋಂಗಿ ಬಾಬ : ಪೋಷಕರ ಎದುರೇ ಯುವತಿಗೆ ಮಾಡಿದ್ದೇನು ?

ದೆಹಲಿ : ದೇಶ ಎಷ್ಟೇ ಅಭಿವೃದ್ಧಿ ಹೊಂದಿದರೂ ಜನರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ರಾಜಧಾನಿ ದೆಹಲಿಯಲ್ಲಿ ಮೂಢನಂಬಿಕೆಗೆ ಕಟ್ಟು ಬಿದ್ದ ಕುಟುಂಬವೊಂದು ಕಳ್ಳ ಸನ್ಯಾಸಿಯ ಮಾತು ಕೇಳಿ ಮಗಳ ಅತ್ಯಾಚಾರವನ್ನು ಸಹಿಸಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಢೋಂಗಿ ಸನ್ಯಾಸಿಯೊಬ್ಬ ಕಳೆದ 11 ವರ್ಷಗಳಿಂದ ಪೋಷಕರ ಎದುರೇ ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದು, ಇದು ಶುದ್ದೀಕರಣದ ಪ್ರಕ್ರಿಯೆ ಎಂದಿದ್ದಾನೆ. ಇದನ್ನು ನಂಬಿದ ಪೋಷಕರು ಮಗಳನ್ನು ಢೋಂಗಿ ಸ್ವಾಮೀಜಿಯ ಬಳಿ ಹೋಗಲು ಅನುಮತಿ ನೀಡಿದ್ದಾರೆ.

ದೇವಿ ಶರ್ಮಾ ಹಾಗೂ ಆತನ ಪತ್ನಿ ಕೆಲ ವರ್ಷಗಳ ಹಿಂದೆ ಸಂಬಂಧಿಯೊಬ್ಬರನ್ನು ಹತ್ಯೆ ಮಾಡಿದ್ದರು. ಅದರ ಭಯವನ್ನು ಹೋಗಲಾಡಿಸಲು 11 ವರ್ಷಗಳ ಹಿಂದೆ ದೇವಿ ಶರ್ಮಾ ಮಂತ್ರವಾದಿಯೊಬ್ಬನನ್ನು ಮನೆಗೆ ಕರೆಸಿದ್ದನು. ಆಗ ಮನೆಗೆ ಬಂದ ಸನ್ಯಾಸಿ ಪೂಜೆ ಮಾಡಿ ಬಳಿಕ 14 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದು ಶುದ್ಧೀಕರಣ ಪ್ರಕ್ರಿಯೆ. ಇದಕ್ಕೆ ಯಾರೂ ತಡೆಯೊಡ್ಡಬೇಡಿ ಎಂದು ಪೋಷಕರ ಬಾಯಿ ಮುಚ್ಚಿಸಿದ್ದಾನೆ. ಕಳೆದ 11 ವರ್ಷಗಳಿಂದ ಮನೆಗೆ ಬರುತ್ತಿರುವ ಸನ್ಯಾಸಿ ಬಾಲಕಿಯ ಮೇಲೆ ಅತ್ಯಾಚಾರವೆಸಗುತ್ತಿದ್ದಾನೆ. ಆದರೆ ಸಂತ್ರಸ್ತ ಯುವತಿ ಈಗ ಈ ವಿಚಾರವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.

ಅನೇಕ ದಿನಗಳಿಂದ ಈ ವಿಚಾರವಾಗಿ ದೂರು ನೀಡಲು ಮುಂದಾದರೂ ಪೊಲೀಸರು ಆಕೆಯ ದೂರನ್ನು ಸ್ವೀಕರಿಸಲು ಹಿಂಜರಿದಿದ್ದು, ಆತನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ. ಬಳಿಕ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿರುವುದಾಗಿ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

Leave a Reply

Your email address will not be published.