Cricket : 4ನೇ ಏಕದಿನಕ್ಕೆ ವಾಂಡರರ್ಸ್ ಸಜ್ಜು : ಇತಿಹಾಸ ಸೃಷ್ಟಿಸಲಿದೆಯೇ ಕೊಹ್ಲಿ ಪಡೆ..?

ಜೋಹಾನೆಸ್ ಬರ್ಗ್ ನ ವಾಂಡರರ್ಸ್ ಮೈದಾನದಲ್ಲಿ ಭಾನುವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ 4ನೇ ಏಕದಿನ ಪಂದ್ಯ ನಡೆಯಲಿದೆ. ಸರಣಿಯಲ್ಲಿ ಈಗಾಗಲೇ 3-0 ಯಿಂದ ಮುನ್ನಡೆಯಲ್ಲಿರುವ ಭಾರತ ಸರಣಿ ಕೈವಶ ಮಾಡಿಕೊಳ್ಳುವ ಉದ್ದೇಶದೊಂದಿಗೆ ಕಣಕ್ಕಿಳಿಯಲಿದೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಇದುವರೆಗೆ ಒಮ್ಮೆಯೂ ಸರಣಿ ಜಯ ಸಾಧಿಸಿಲ್ಲ. ಕೊಹ್ಲಿ ಪಡೆ ವಾಂಡರರ್ಸ್ ಅಂಗಳದಲ್ಲಿ 4ನೇ ಏಕದಿನ ಪಂದ್ಯವನ್ನು ಗೆದ್ದು ಮೊಟ್ಟ ಮೊದಲ ಸರಣಿ ಗೆಲುವಿನ ಇತಿಹಾಸ ಸೃಷ್ಟಿಸುವ ತವಕದಲ್ಲಿದೆ.

ಸರಣಿಯಲ್ಲಿ ಎರಡು ಶತಕ ಬಾರಿಸಿರುವ ನಾಯಕ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಭಾರತದ ಯಜುವೇಂದ್ರ ಚಹಲ್ – ಕುಲದೀಪ್ ಯಾದವ್ ಸ್ಪಿನ್ ಜೋಡಿ ಬೌಲಿಂಗ್ ಎದುರಾಳಿಗಳ ನಿದ್ದೆಗೆಡಿಸಿದೆ. ಗಾಯದ ಸಮಸ್ಯೆಯಿಂದ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಎಬಿ ಡಿವಿಲಿಯರ್ಸ್ ತಂಡಕ್ಕೆ ಮರಳಲಿದ್ದಾರೆ.

Leave a Reply

Your email address will not be published.