‘ಅಪ್ಪು’ಗೆ ಅಭಿಮಾನಿಯಿಂದ ಸಿಕ್ತು ಭರ್ಜರಿ ಉಡುಗೊರೆ…ಇದಕ್ಕೆ ಪುನೀತ್‌ ಹೇಳಿದ್ದೇನು…..?

ಬೆಂಗಳೂರು : ಪವರ್ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅವರ ಅಭಿನಯ, ಹಾಡು, ಡಾನ್ಸ್‌ ಎಲ್ಲದಕ್ಕೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ ಪುನಿತ್‌ಗೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದು, ಈಗ ಅಂತಹ ಒಬ್ಬ ಅಭಿಮಾನಿ ಪುನೀತ್‌ಗೆ ಗಿಫ್ಟೊಂದನ್ನು ನೀಡಿದ್ದಾರೆ.
ಹೌದು ಅಭಿಮಾನಿಯೊಬ್ಬರು ಪುನಿತ್‌ಗೆ ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪುಸ್ತಕ ಹಿಡಿದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪುನಿತ್‌, ಬೆಟ್ಟದ ಹೂ ಸಿನಿಮಾದಲ್ಲಿ ಎಷ್ಟೇ ದುಡ್ಡು ಸೇವ್ ಮಾಡಿದರೂ ಈ ಪುಸ್ತಕ ಕೊಂಡು ಕೊಳ್ಳಲು ಸಾಧ್ಯವಾಗಿರಲಿಲ್ಲ. ಕೊನೆಗೂ ಅಭಿಮಾನಿಯೊಬ್ಬರು ಈ ಗಿಫ್ಟ್‌ ನೀಡಿರುವುದಾಗಿ ಪೋಸ್ಟ್ ಮಾಡಿದ್ದಾರೆ.
 ಪುನಿತ್‌ ಅವರ ಈ ಸರಳತೆಗೆ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದು, ಕಮೆಂಟ್‌ಗಳ ಸುರಿಮಳೆಯನ್ನು ಸುರಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com