ಕೇಂದ್ರ ಸರ್ಕಾರ ನಮ್ಮನ್ನು ಈ ದೇಶದ ಭಾಗವಲ್ಲ ಎಂಬಂತೆ ನೋಡುತ್ತಿದೆ : ಚಂದ್ರಬಾಬು ನಾಯ್ಡು

ವಿಜಯವಾಡ : ಈ ಬಾರಿಯ ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ಕಡಿಮೆ ಪ್ರಮಾಣದಲ್ಲಿ ನೆರವು ನೀಡಿರುವ ಕೇಂದ್ರ ಸರ್ಕಾರದ ವಿರುದ್ದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರದ ವರ್ತನೆಯನ್ನು ನೋಡಿದರೆ ನಮ್ಮ ರಾಜ್ಯವನ್ನು ದೇಶದ ಭಾಗವಲ್ಲವೆಂದು ಪರಿಗಣಿಸಿದಂತಿದೆ ಎಂದಿದ್ದಾರೆ. ಸದ್ಯ ದುಬೈನಲ್ಲಿರುವ ನಾಯ್ಡು, ಇಬ್ಬರು ಸಚಿವರು ಸೇರಿದಂತೆ ಟಿಡಿಪಿ ಸಂಸದರ ಜೊತೆ ಗುರುವಾರ ತುರ್ತು ಸಭೆ ನಡೆಸಿ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ.

ಆಂಧ್ರಪ್ರದೇಶ ಭಾರತ ದೇಶದಲ್ಲಿಲ್ಲ ಎನ್ನುವಂತೆ ಕೇಂದ್ರ ಸರ್ಕಾರ ವರ್ತಿಸುತ್ತಿದೆ. ರಾಜ್ಯದ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇ. ಹೀಗೆಂದು ಚಂದ್ರಬಾಬು ನಾಯ್ಡು ನಮಗೆ ಸೂಚಿಸಿರುವುದಾಗಿ ಟಿಡಿಪಿ ಸಂಸದೀಯ ಪಕ್ಷದ ನಾಯಕ ತೋಟಾ ನರಸಿಂಹನ್‌ ಹೇಳಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com