ಹಿಂದೂ ಯುವಕನ ಮತಾಂತರ ಮಾಡಿದ ಮುಸ್ಲಿಂ ಮೌಲ್ವಿಗಳು : ಕುಟುಂಬಸ್ಥರ ಆಕ್ರಂದನ
ವಿಜಯಪುರ : ವಿಜಯಪುರದಲ್ಲೊಂದು ಮತಾಂತರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರದ ಇಂಡಿಯ ನಿವಾಸಿಯಾದ ಲಕ್ಷ್ಮೀಕಾಂತ್ ಎಂಬ ಯುವಕನನ್ನು ಮುಸ್ಲಿಂ ಮೌಲ್ವಿಗಳು ಮತಾಂತರ ಮಾಡಿರುವುದಾಗಿ ಲಕ್ಷ್ಮೀಕಾಂತ್ ತಂದೆ ಲಕ್ಕಪ್ಪ ಆರೋಪಿಸಿದ್ದಾರೆ.
ಲಕ್ಷ್ಮೀಕಾಂತ್ ಚಿಕ್ಕವನಾಗಿದ್ದಾಗಿನಿಂದ ಮುಸ್ಲೀಂ ಹುಡುಗರ ಜೊತೆ ಹೆಚ್ಚಾಗಿ ಒಡನಾಟವಿಟ್ಟುಕೊಂಡಿದ್ದ. ಆದರೆ ಕಳೆದ ಒಂದು ವಾರದ ಹಿಂದೆ ಆತನನ್ನು ಮುಸ್ಲಿಂ ಮೌಲ್ವಿಗಳು ಮತಾಂತರ ಮಾಡಿದ್ದಾರೆ. ಒಂದು ವಾರದಿಂದ ಆತ ಮನೆಗೆ ಬಂದಿಲ್ಲ. ಆತನಿಗೆ ಮುಸ್ಲಿಂ ಧರ್ಮದ ಬಗ್ಗೆ ತಲೆಗೆ ತುಂಬಿ ಆತನನ್ನು ತಮ್ಮ ಧರ್ಮಕ್ಕ ಸೆಳೆದುಕೊಂಡಿದ್ದಾರೆ ಎಂದು ಲಕ್ಕಪ್ಪ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದರಲ್ಲಿ ಇಂಡಿ ಪಟ್ಟಣದ ಮೌಲ್ವಿ ಸಾಜಿರ್ ಎಂಬಾತನ ಕೈವಾಡವಿರುವುದಾಗಿ ಆರೋಪಿಸಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.