ಮಠಗಳ ಮೇಲೆ ಕೈ ಹಾಕುವುದು ರಾವಣ ಸೀತೆಯನ್ನು ಮುಟ್ಟಿದಂತೆ : ವಿದ್ಯಾಧೀಶ ತೀರ್ಥ ಸ್ವಾಮೀಜಿ

ಉಡುಪಿ : ಹುತ್ತವನ್ನು ಪೂಜಿಸಬೇಕೇ ಹೊರತು ಅದರೊಳಗೆ ಕೈ ಹಾಕಬಾರದು. ದೇವಸ್ಥಾನಗಳ ಮೇಲೆ ಕೈ ಹಾಕುವುದು ರಾವಣ ಸೀತೆಯನ್ನು ಮುಟ್ಟಿದಂತೆ. ಮಠ ಮಂದಿರಗಳಿಗೆ ಕೈ ಹಾಕುವುದು ಬೆಂಕಿಗೆ ಕೈ ಹಾಕಿದಂತೆ. ಬೆಂಕಿ ಪ್ರವೇಶ ಮಾಡುವುದು ದುರಂತದ ಚಿಂತನೆ ಎಂದು ವಿದ್ಯಾಧೀಶ ತೀರ್ಥ ಪಾಲಿಮಾರು ಸ್ವಾಮೀಜಿ ಹೇಳಿದ್ದಾರೆ.

ರಾಜ್ಯ ಸರ್ಕಾರ ಮಠ ಹಾಗೂ ದೇವಸ್ಥಾನಗಳನ್ನು ಸರ್ಕಾರದ ಸುಪರ್ದಿಗೆ ವಹಿಸುವ ಕುರಿತು ಪ್ರತಿಕ್ರಿಯಿಸಿರುವ ಅವರು, ಸರ್ಕಾರಕ್ಕೆ ಬೇಕಾದಷ್ಟು ಕೆಲಸವಿದೆ. ಸರ್ಕಾರಿ ಶಾಲೆ, ಆಸ್ಪತ್ರೆಯನ್ನು ಮೊದಲು ಸರಿಯಾಗಿ ನಡೆಸಲಿ. ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ಮುಖಂಡರೇ ನಡೆಸುವುದು ನ್ಯಾಯ. ಚರ್ಚು, ಮಸೀದಿಗಳಿಗೆ ಕೈಹಾಕದ ಸರ್ಕಾರ ಹಿಂದೂ ಕೇಂದ್ರಗಳನ್ನೇ ಗುರಿ ಮಾಡುವುದು ಯಾಕೆ? ಎಂದು ಪ್ರಶ್ನಿಸಿದ್ದು, ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಯಾವ ನ್ಯಾಯ?.ಭಕ್ತರನ್ನು ವಿರೋಧಿಸುವ ತುಂಟತನದ ಸಾಹಸ ದುರಂತಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ.

 

Leave a Reply

Your email address will not be published.