ಮಾಣಿಕ್‌ ಸರ್ಕಾರ ಮಂತ್ರವಾದಿ ಸರ್ಕಾರ : ತ್ರಿಪುರಾ CM ವಿರುದ್ಧ ಮೋದಿ ವಾಗ್ದಾಳಿ

ಅಗರ್ತಲಾ : ತ್ರಿಪುರದ ಸಿಎಂ ಮಾಣಿಕ್‌ ಸರ್ಕಾರ ಮಂತ್ರವಾದಿ ಸರ್ಕಾರ. ಅವರ ಕರಾಳ ಯುಗದ ಅಂತ್ಯದ ಕಾಲ ಸಮೀಪವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ತ್ರಿಪುರಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಮಾಣಿಕ್‌ ಸರ್ಕಾರವನ್ನು ಹೀರಾ ಸರ್ಕಾರ ಬದಲಿಸುತ್ತದೆ. ಹೀರಾ ಎಂದರೆ ಹೈವೇ, ಐ-ವೇ, ರೋಡ್‌ ವೇ ಹಾಗೂ ಏರ್‌ ವೇ ಎಂದಿದ್ದಾರೆ. ತ್ರಿಪುರಾದಲ್ಲಿ ಫೆಬ್ರವರಿ 18ರಂದು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ತ್ರಿಪುರಾದಲ್ಲಿ ಅಭಿವೃದ್ಧಿಯ ಮಹಾ ಪರ್ವ ಆರಂಭವಾಗಿದೆ. ಮಾಣಿಕ್‌ ಸರ್ಕಾರ ರಾಜ್ಯದ ಜನರಿಗೆ ವಂಚಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ.

 

Leave a Reply

Your email address will not be published.