ನ್ಯಾಯಾಧಿಕರಣ ತೀರ್ಪು ನೀಡದ ಹೊರತು ನೀರು ಬಿಡಲ್ಲ : ಮತ್ತೆ ಕ್ಯಾತೆ ತೆಗೆದ ಗೋವಾ CM

ಪಣಜಿ : ಮಾನವೀಯ ದೃಷ್ಠಿಯಿಂದ ಕರ್ನಾಟಕಕ್ಕೆ ಕುಡಿಯಲು ಮಹದಾಯಿ ನೀರನ್ನು ಬಿಡುವುದಾಗಿ ಹೇಳಿದ್ದ ಗೋವಾ ಸಿಎಂ ಮನೋಹರ್‌ ಪರ್ರಿಕ್ಕರ್‌ ಮತ್ತೆ ಉಲ್ಟಾ ಹೊಡೆದಿದ್ದಾರೆ.
 ಈ ಕುರಿತು ಪ್ರತಿಕ್ರಿಯಿಸಿರುವ ಪರಿಕ್ಕರ್‌, ಕೇಂದ್ರ ಸರ್ಕಾರ ನೇಮಿಸಿರುವ ನ್ಯಾಯಾಧಿಕರಣವೇ ಮಹದಾಯಿ ನೀರು ಹಂಚಿಕೆ ಕುರಿತು ನಿರ್ಧಾರ ಮಾಡಲಿ ಎಂದಿದ್ದಾರೆ.
ಮಹದಾಯಿ ನದಿ ನೀರಿನ ಹಂಚಿಕೆ ಕುರಿತಂತೆ ನಾವು ನ್ಯಾಯಾಧಿಕರಣದಲ್ಲೇ ಹೋರಾಟ ಮಾಡುತ್ತೇವೆ. ಎಲ್ಲಾ ವಿಷಯಗಳಲ್ಲಿ ನಾವೇ ಏಕೆ ಉತ್ತರಿಸಬೇಕು. ತೀರ್ಮಾನವಾಗುವುದಾದರೆ ನ್ಯಾಯಾಧಿಕರಣದಲ್ಲೇ ಆಗಲಿ. ಕರ್ನಾಟಕದ ಸಿಎಂ ಸಿದ್ದರಾಮಯ್ಯರ ಅವರ ನಡೆ ಸರಿಯಲ್ಲ. ನ್ಯಾಯಾಧಿಕರಣ ತೀರ್ಪು ನೀಡದ ಹೊರತು ನಾವು ನೀರು ಬಿಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.