ಭಾರತದಲ್ಲಿದ್ದ ಪ್ರೇಯಸಿಯನ್ನು ನೋಡಲು ಈ ತಪ್ಪು ಮಾಡಿ ಸಿಕ್ಕಿಬಿದ್ದ ಯುವಕ…!!

ದುಬೈ : ಯುಎಇಯಲ್ಲಿ ಇಂಜಿನಿಯರ್‌ ಆಗಿದ್ದ ಯುವಕನೊಬ್ಬ ಭಾರತದಲ್ಲಿದ್ದ ತನ್ನ ಪ್ರಿಯತಮೆಯನ್ನು ನೋಡಲು ಹೋಗಿ ಪೇಚಿಗೆ ಸಿಲುಕಿರುವ ಘಟನೆ ಶಾರ್ಜಾ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಪ್ರಿಯತಮೆಯನ್ನ ನೋಡುವ ಸಲುವಾಗಿ ತಪ್ಪೆಸಗಿದ ಯುವಕನನ್ನು ಆರ್ ಕೆ ಎಂದು ಹೆಸರಿಸಲಾಗಿದೆ. ಈತ ಭಾರತೀಯ ಮೂಲದವನಾಗಿದ್ದು, ಈತನಿಗೆ ಭಾರತಕ್ಕೆ ಬಂದು ತನ್ನ ಪ್ರಿಯತಮೆಯನ್ನು ನೋಡುವ ಆಸೆಯಿತ್ತು. ಆದರೆ  ಆರ್‌.ಕೆ ಕೆಲಸ ಮಾಡುತ್ತಿದ್ದ ಸಂಸ್ಥೆ ಆತನ ಪಾಸ್‌ಪೋರ್ಟನ್ನು ವಶಪಡಿಸಿಕೊಂಡಿತ್ತು. ಆದ ಕಾರಣ ಆರ್‌ಕೆ ವಿಮಾನ ನಿಲ್ದಾಣದ ಗೋಡೆ ಹತ್ತಿ ರನ್‌ವೇಗೆ ಓಡಿ ಬಂದಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಪೊಲೀಸರು ಈತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಈ ವೇಳೆ ಆರ್‌ಕೆ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ನಾನು ತಿಳಿದೇ ತಪ್ಪು ಮಾಡಿದೆ. ಪೊಲೀಸರು ನನ್ನನ್ನು ಬಂಧಿಸಿದರೆ ಕೋರ್ಟ್‌ ಪ್ರಕ್ರಿಯೆಯ ನೆಪದಲ್ಲಿ ನನಗೆ ನನ್ನ ಪಾಸ್‌ಪೋರ್ಟ್‌ ಸಿಗಲಿದೆ. ಅಲ್ಲದೆ ನನ್ನನ್ನು ಗಡಿಪಾರು ಮಾಡಲಾಗುತ್ತದೆ. ಆಗ ನಾನು ನನ್ನ ಪ್ರೇಯಸಿಯನ್ನು ನೋಡಬಹುದು ಎಂದಿದ್ದಾನೆ. ಕೋರ್ಟ್ ಈತನ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಪಾಸ್‌ಪೋರ್ಟ್‌ ನೀಡದ ಸಂಸ್ಥೆ ವಿರುದ್ದ ತನಿಖೆಗೆ ಆದೇಶಿಸಿದೆ.

 

Leave a Reply

Your email address will not be published.

Social Media Auto Publish Powered By : XYZScripts.com