Watch : ರೇಣುಕಾ ‘ಅಟ್ಟಹಾಸ’ದ ನಗುವಿಗೆ ಮೋದಿ ಕೊಟ್ಟ ಉತ್ತರ ಕೇಳಿದ್ರೆ ನೀವು ನಗದೇ ಇರಲ್ಲ..!

ದೆಹಲಿ : ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಕಾಂಗ್ರೆಸ್‌ ನಾಯಕಿ ರೇಣುಕಾ ಚೌಧರಿ ಅಟ್ಟಹಾಸದ ನಗು ಬೀರಿದ್ದು, ಇದಕ್ಕೆ ಪ್ರಧಾನಿ ಮೋದಿಯವರ ಉತ್ತರದಿಂದ ಎಲ್ಲರೂ ನಡೆಗಡಲಲ್ಲಿ ತೇಲುವಂತಾಗಿದೆ.

ಆಧಾರ್‌ ಕುರಿತಂತೆ ಪ್ರಧಾನಿ ಮೋದಿ ಮಾತನಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ರೇಣುಕಾ ಚೌಧರಿ ಅಟ್ಟಹಾಸದ ನಗು ನಕ್ಕಿದ್ದಾರೆ. ಈ ವೇಳೆ ಸಭಾಪತಿ ವೆಂಕಯ್ಯನಾಯ್ಡು ಮಧ್ಯಪ್ರವೇಶಿಸಿ, ಏನಾಗಿದೆ ನಿಮಗೆ, ಹೀಗ್ಯಾಕೆ ನಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದಲ್ಲದೆ, ನಿಮಗೇನಾದರೂ ತೊಂದರೆ ಇದ್ದರೆ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಪಡೆಯಿರಿ ಎಂದಿದ್ದಾರೆ.

ಈ ವೇಳೆ ಮೋದಿ ಮಧ್ಯ ಪ್ರವೇಶಿಸಿದ್ದು, ಸಭಾಪತಿಯವರೇ ರೇಣುಕಾ ಅವರಿಗೆ ಏನೂ ಹೇಳಬೇಡಿ, ರಾಮಾಯಣ ಸೀರಿಯಲ್‌ ಬಳಿಕ ಈ ರೀತಿ ನಗು ಕೇಳುವ ಸೌಭಾಗ್ಯ ನಮಗೆ ಇಂದು ಸಿಕ್ಕಿದೆ ಎಂದಿದ್ದು, ಇಡೀ ಸದನ ನಗುವಿನಿಂದ ತುಂಬಿ ಹೋಗಿತ್ತು.

ಬಳಿಕ ಕಾಂಗ್ರೆಸ್‌ ಸದಸ್ಯರ ಗದ್ದಲದಿಂದ ಸದನವನ್ನು ಕೆಲಕಾಲ ಮುಂದೂಡಬೇಕಾಯಿತು.

ಇದಾದ ಬಳಿಕ ರೇಣುಕಾ ಚೌಧರಿ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ನನ್ನ ವಿರುದ್ಧ ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದ್ದರು. ಅಲ್ಲೇ ಸರಿಯಾಗಿ ಉತ್ತರಿಸಬೇಕೆಂದಿದ್ದೆ, ಆದರೆ ಆ ಮಟ್ಟಕ್ಕೆ ನಾನು ಇಳಿಯಲು ಸಾಧ್ಯವಿಲ್ಲ. ಇದು ಮಹಿಳೆಯರಿಗೆ ಮೋದಿ ಮಾಡಿದ ಅವಮಾನ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com