Cricket : ಸ್ಟಂಪ್ಸ್ ಹಿಂದೆ Dhoni ಮತ್ತೊಂದು ವಿಕ್ರಮ : MSD ನಿರ್ಮಿಸಿದ ದಾಖಲೆಯೇನು..?

ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಯಶಸ್ವೀ ನಾಯಕರಲ್ಲಿ ಒಬ್ಬರೆನ್ನುವುದರಲ್ಲಿ ಅನುಮಾನವಿಲ್ಲ. ಅದರೊಂದಿಗೆ ಧೋನಿ ಒಬ್ಬ ಅತ್ಯುತ್ತಮ ವಿಕೆಟ್ ಕೀಪರ್ ಎನ್ನುವುದೂ ನಿಜ. ಸ್ಟಂಪ್ಸ್ ಹಿಂದೆ ತಮ್ಮ ಚುರುಕುತನದಿಂದ ಎದುರಾಳಿ ಬ್ಯಾಟ್ಸಮನ್ ಗಳನ್ನು ಔಟ್ ಮಾಡುವುದರಲ್ಲಿ ಧೋನಿ ನಿಷ್ಣಾತರು.

ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಧೋನಿ ಮತ್ತೊಂದು ವಿಕ್ರಮ ಮೆರೆದಿದ್ದಾರೆ. ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 400 ಕ್ಕೂ ಹೆಚ್ಚು ಬ್ಯಾಟ್ಸಮನ್ ಗಳನ್ನು ಔಟ್ ಮಾಡಿದ ಭಾರತದ ಪ್ರಥಮ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

Image result for dhoni 400

ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಸಿಂಗ್ ಚಹಲ್ ಅವರ ಬೌಲಿಂಗ್ ನಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟ್ಸಮನ್ ಏಡನ್ ಮರ್ಕ್ರಮ್ ಅವರನ್ನು ಸ್ಟಂಪ್ ಔಟ್ ಮಾಡಿ ಧೋನಿ ಈ ಸಾಧನೆ ಮಾಡಿದ್ದಾರೆ. ಒಟ್ಟು 400 ವಿಕೆಟ್ ಗಳಲ್ಲಿ 294 ಕ್ಯಾಚ್ ಹಾಗೂ 94 ಸ್ಟಂಪಿಂಗ್ ಗಳು ಸೇರಿವೆ.

Leave a Reply

Your email address will not be published.

Social Media Auto Publish Powered By : XYZScripts.com