Cricket : ಝುಲನ್ ಗೋಸ್ವಾಮಿ ದಾಖಲೆ : 200 ODI ವಿಕೆಟ್ ಪಡೆದ ಪ್ರಥಮ ಮಹಿಳಾ ಕ್ರಿಕೆಟರ್

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್ ಆಗಿರುವ ಝೂಲನ್ ಗೋಸ್ವಾಮಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 200 ಏಕದಿನ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ಖ್ಯಾತಿಗೆ ಝುಲನ್ ಗೋಸ್ವಾಮಿ ಪಾತ್ರರಾಗಿದ್ದಾರೆ.

ಬುಧವಾರ ಕಿಂಬರ್ಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ಜಯ ಗಳಿಸಿತ್ತು. ಈ ಪಂದ್ಯದಲ್ಲಿ ಆತಿಥೇಯ ತಂಡದ ಲಾರಾ ವೋಲ್ವಾರ್ಡ್ಟ್ ಅವರ ವಿಕೆಟ್ ಪಡೆದು ಝುಲನ್ ಗೋಸ್ವಾಮಿ 200 ವಿಕೆಟ್ ದಾಖಲೆಯನ್ನು ತಮ್ಮ ಹೆಸರಲ್ಲಿ ಬರೆದುಕೊಂಡಿದ್ದಾರೆ. ಝುಲನ್ ಗೋಸ್ವಾಮಿ 2002 ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com