ಶೋಭಾ ಬಾಯಿ ಮುಚ್ಚಿಸಲು BJP ಯಲ್ಲಿ ಯಾರೂ ಇಲ್ಲವಾ ? : ರಾಮಲಿಂಗಾರೆಡ್ಡಿ

ಬೆಂಗಳೂರು : ಬಿಜೆಪಿ ಕಾರ್ಯಕರ್ತ ಸಂತೋಷ್‌ ಹತ್ಯೆ ವಿಚಾರವಾಗಿ ಶೋಭಾ ಕರಂದ್ಲಾಜೆ ನೀಡಿದ್ದ ಹೇಳಿಕೆಗೆ ಗೃಹ ಸಚಿವ  ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ಸಂತೋಷ್‌ ಹತ್ಯೆಯಾದ ದಿನ ಸಿಎಂ ಸಿದ್ದರಾಮಯ್ಯ ಅವರು  ಯು.ಟಿ ಖಾದರ್‌ ಅವರ ಮನೆಗೆ ಹೋಗಿ ಅಲ್ಪಸಂಖ್ಯಾತರ ವಿಚಾರ ಸಂಬಂಧ ಚರ್ಚಿಸಿದ್ದರು. ಹಾಗೆಯೇ ಖಾದರ್‌ ಅವರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದು, ಆದ ಕಾರಣ ಊಟ ಮಾಡಿ ಬಂದಿದ್ದರು. ಆದರೆ ಅವರ ವಿರುದ್ದ ಶೋಭಾ ಹೇಳಿಕೆ ಸರಿಯಲ್ಲ. ಔತಣಕೂಟಕ್ಕೆ ಹೋಗಿ ಸಿಎಂ ಮೋಜು ಮಸ್ತಿ ಮಾಡಿಲ್ಲ. ಶೋಭಾ ತಮ್ಮ ಮಿತಿಯಲ್ಲಿದ್ದರೆ ಒಳ್ಳೆಯದು ಎಂದಿದ್ದಾರೆ.
ಯಡಿಯೂರಪ್ಪ, ಶೋಭಾ, ಈಶ್ವರಪ್ಪ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರೂ ಔತಣಕೂಟಕ್ಕೆ ಹೋಗುತ್ತಾರೆ. ಅಲ್ಲಿ ನೀವು ಊಟ ಮಾಡುತ್ತೀರೋ ಅಥವಾ ನೃತ್ಯ ಮಾಡುತ್ತೀರೋ ಎಂದು ಪ್ರಶ್ನಿಸಿದ್ದು, ಈ ಶೋಭಾರಿಗೆ ಯಾಕೆ ಬಿಜೆಪಿ ನಾಯಕರು ಏನೂ ಹೇಳುತ್ತಿಲ್ಲ. ಬಿಜೆಪಿಯಲ್ಲಿ ಶೋಭಾ ಬಾಯಿ ಮುಚ್ಚಿಸುವವರು ಯಾರೂ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಕಾಂಗ್ರೆಸ್‌ ನಾಯಕ ಜನಾರ್ಧನ ಪೂಜಾರಿ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ಬಗ್ಗೆ ರಮ್ಯಾ ಬಾಯಿಗೆ ಬಂದಂತೆ ಮಾತನಾಡುತ್ತಾರಲ್ಲ ಅವರನ್ನು ನಿಯಂತ್ರಿಸಲು ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.