ಭ್ರಷ್ಟಾಚಾರ ಪ್ರಕರಣ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾಗೆ 5 ವರ್ಷ ಜೈಲು

ಢಾಕಾ : ಭ್ರಷ್ಟಾಚಾರ ಪ್ರಕರಣದಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾಗೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಎರಡು ಬಾರಿ ಖಲೀದಾ ಬಾಂಗ್ಲಾದೇಶದ ಪ್ರಧಾನಿಯಾಗಿದ್ದು ಅನಾಥಾಶ್ರಮಕ್ಕೆ ಸೇರಬೇಕಿದ್ದ ಹಣದಲ್ಲಿ ಅಕ್ರಮ ಎಸಗಿರುವುದು ರುಜುವಾತಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಬಾಂಗ್ಲಾದೇಶದ ಹಾಲಿ ವಿಪಕ್ಷ ನಾಯಕಿಯಾಗಿರುವ ಖಲೀದಾ, ಅನಾಥಾಶ್ರಮಕ್ಕೆ ಮೀಸಲಾಗಿದ್ದ  $2,52,000 ಹಣವನ್ನು ಕೊಳ್ಳೆ ಹೊಡೆದಿರುವುದಾಗಿ ಸಾಬೀತಾಗಿದೆ. ಜಿಯಾ ಅವರ ಮಗ ತಾರಿಕ್ ರೆಹಮಾನ್‌ ಸಹ ಪ್ರಕರಣದ ಆರೋಪಿಯಾಗಿದ್ದು, ಇನ್ನುಳಿದ ನಾಲ್ವರಿಗೆ ತಲಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇನ್ನು ಪಕ್ಷದ ನಾಯಕಿಗೆ ಜೈಲು ಶಿಕ್ಷೆಯಾಗುತ್ತಿದ್ದಂತೆ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

Leave a Reply

Your email address will not be published.

Social Media Auto Publish Powered By : XYZScripts.com