Cricket : ಕೊಹ್ಲಿ ಅಮೋಘ ಶತಕ : ಚಹಲ್-ಯಾದವ್ ಸ್ಪಿನ್ ಮೋಡಿ : ಭಾರತಕ್ಕೆ ಜಯ

ಕೇಪ್ಟೌನ್ ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಬುಧವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ರನ್ ಜಯ ಸಾಧಿಸಿದೆ. ಇದರೊಂದಿಗೆ ಕೊಹ್ಲಿ ಪಡೆ ಸರಣಿಯಲ್ಲಿ 3-0 ಮುನ್ನಡೆ ಪಡೆದುಕೊಂಡಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲ ಬ್ಯಾಟ್ ಮಾಡಲಿಳಿದ ಭಾರತ ನಿಗದಿತ 50 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 303 ರನ್ ಮೊತ್ತ ಕಲೆ ಹಾಕಿತು. 34ನೇ ಏಕದಿನ ಶತಕ ದಾಖಲಿಸಿದ ನಾಯಕ ವಿರಾಟ್ ಕೊಹ್ಲಿ 160 ರನ್ ಬಾರಿಸಿದರು. 159 ಎಸೆತಗಳನ್ನೆದುರಿಸಿದ ವಿರಾಟ್ 12 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ 76 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಆಫ್ರಿಕಾ ತಂಡ 40 ಓವರುಗಳಲ್ಲಿ 179ಕ್ಕೆ ಆಲೌಟ್ ಆಯಿತು. ಜೆಪಿ ಡು ಡುಮಿನಿ 51, ಏಡನ್ ಮರ್ಕ್ರಮ್ 32 ಹಾಗೂ ಡೇವಿಡ್ ಮಿಲ್ಲರ್ 25 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸಮನ್ ಗಳ್ಯಾರೂ ಮಿಂಚಲಿಲ್ಲ. ಭಾರತದ ಸ್ಪಿನ್ ಜೋಡಿ ಯಜುವೇಂದ್ರ ಸಿಂಗ್ ಚಹಲ್ 4 ಹಾಗೂ ಕುಲದೀಪ್ ಯಾದವ್ 4 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com