Mysore : ಕರ್ನಾಟಕದಲ್ಲಿರುವ ಎಲ್ಲಾ ಸಂಸದರೂ ಷಂಡರು…..!!!

ಮೈಸೂರು : ಕರ್ನಾಟಕ ರಾಜ್ಯದ ಸಂಸದರೆಲ್ಲರು ಷಂಡರು ಎಂದು ಕನ್ನಡ ವೇದಿಕೆ ಕಾರ್ಯಕರ್ತ ರೇವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಹದಾಯಿ ನದಿ ನೀರಿಗಾಗಿ ಉತ್ತರ ಕರ್ನಾಟಕದ ಜನ ಹಾತೊರೆಯುತ್ತಿದ್ದಾರೆ. ಅವರಿಗಾಗಿ ನಮ್ಮ ಸಂಸದರು ಏನು ಮಾಡಿದ್ದಾರೆ. ಕೇಂದ್ರ ಸರ್ಕಾರದ ಗಮನಕ್ಕೆ ತಂದು ಈ ವಿಚಾರವನ್ನು ಬಗೆಹರಿಸಬೇಕಿತ್ತು. ಅದು ಬಿಟ್ಟು ಬೊಗಳೆ ಮಾತನಾಡುತ್ತಾರೆ. ಈ ವಿಚಾರದಲ್ಲಿ ಸಂಸದರೆಲ್ಲರೂ ಸಾಮೂಹಿಕ ರಾಜೀನಾಮೆ ನೀಡಬೇಕಿತ್ತು ಎಂದು ಕಿಡಿ ಕಾರಿದ್ದಾರೆ.

ಮಹದಾಯಿಗಾಗಿ ಹೋರಾಟ ಮಾಡುವುದನ್ನು ಬಿಟ್ಟು ಹೈಕಮಾಂಡ್‌ ನಿರ್ಧಾರಕ್ಕೆ ಜೋತು ಬಿದ್ದಿದ್ದಾರೆ. ಅವರಿಗೆ ಕನ್ನಡ ನೆಲ ಜಲದ ಬಗ್ಗೆ ಕಾಳಜಿ ಇಲ್ಲ ಎಂದು ಮೈಸೂರಿನ ಕಾಡಾ ಕಛೇರಿ ಎದುರು ಕಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡ್ತಿನಿ ಅಂತ ಭಾಷಣ ಬಿಗಿಯೋ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಹದಾಯಿ ಯೋಜನೆಯನ್ನು ಸಮಸ್ಯೆ ಮುಕ್ತ ಮಾಡಲಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com