ಚುನಾವಣೆಯಲ್ಲಿ ಗೆಲ್ಲಲು ಸಿದ್ದರಾಮಯ್ಯ ರೌಡಿ ಶೀಟರ್‌ಗಳನ್ನು ಬಳಸಿಕೊಳ್ತಿದ್ದಾರೆ : G.T ದೇವೇಗೌಡ

ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೌಡಿ ಶೀಟರ್ ಗಳನ್ನ ಬಳಸಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ ಎಂದು ಕ್ಷೇತ್ರದ ಹಾಲಿ ಶಾಸಕ ಜಿ ಟಿ ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ಕಾನೂನು ಸುವ್ಯವಸ್ಥೆ ಕುರಿತ ಚರ್ಚೆ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಜಿಟಿಡಿ, ಮೈಸೂರು ಜಿಲ್ಲೆ ಸೇರಿದಂತೆ ಅದರಲ್ಲಿಯೂ ಮುಂದೆ ತಾವು ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುವಂತೆ ರೌಡಿ ಶೀಟರ್‌ಗಳಿಗೆ ಸೂಚನೆ ನೀಡಿದ್ದಾರೆ. ಸ್ಥಳೀಯ ಪೊಲೀಸರು ರೌಡಿ ಶೀಟರ್ ಗಳನ್ನು ಸಿಎಂ ಮುಂದೆ ಕರೆದೂಯ್ದು ಪೆರೇಡ್ ನಡೆಸಿದ್ದಾರೆ . ಆ ವೇಳೆ ಮುಖ್ಯಮಂತ್ರಿಗಳು ನೀವು ನಮ್ಮ ಪರವಾಗಿ ಕೆಲಸ ಮಾಡಿದ್ರೆ ,ನಾವು ನಿಮಗೆ ರಕ್ಷಣೆ ಕೊಡಲು ಸಿದ್ದ ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕ ಜಿ ಟಿ ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ

ಚುನಾವಣೆಯಲ್ಲಿ ಗೆಲುವು ಸಾಧಿಸಲು ನಾನಾ ರಣತಂತ್ರ ರೂಪಿಸುವ ರಾಜಕಾರಣಿಗಳು ಸಮಾಜ ಘಾತುಕ ಶಕ್ತಿಗಳನ್ನು ಚುನಾವಣೆಗೆ ಬಳಸಿಕೊಂಡ್ರೆ ಹೇಗೆ ನ್ಯಾಯ ಸಮ್ಮತ ಚುನಾವಣೆ ನಡೆಯಲು ಸಾಧ್ಯ ಎಂದು ಜಿ ಟಿ ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com